ಮಡಿಕೇರಿ, ಜ. ೨೧: ರಾಜ್ಯ ವಿಧಾನ ಪರಿಷತ್‌ನ ಮಾಜಿ ಸದಸ್ಯೆಯಾಗಿದ್ದ ಸಿದ್ದಾಪುರ ಅರೆಕಾಡು ನಿವಾಸಿ ಕಾಡುಮಂಡ ಪಾಲಿ ಅಯ್ಯಪ್ಪ (೯೦-ತಾಮನೆ ಚೆಪ್ಪುಡೀರ) ಅವರು ತಾ. ೨೧ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪಾಲಿ ಅಯ್ಯಪ್ಪ ಅವರು ೧೯೮೨ ರಿಂದ ೧೯೮೮ರ ಅವಧಿಯಲ್ಲಿ ಗುಂಡೂರಾವ್ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್‌ಗೆ ನಾಮಕರಣಗೊಂಡಿದ್ದರು. ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ೧೯೮೬-೮೭ರ ಅವಧಿಯಲ್ಲಿ ವೀರಾಜಪೇಟೆಯಲ್ಲಿ ನಡೆದ ಹೋರಾಟವೊಂದರಲ್ಲಿ ಪಾಲಿ ಅಯ್ಯಪ್ಪ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ಸುಮಾರು ೩ ಸಾವಿರದಷ್ಟು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.