ಇಂದು ಅಂತಿಮ ಪಂದ್ಯ

ಮಡಿಕೇರಿ, ಜ. ೨೧: ವೈಲ್ಡ್ ಮಾಸ್ಟರ್ಸ್ ಕೊಡಗು ಆಯೋಜಿತ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ ೧೦ ಲೆದರ್ ಬಾಲ್ ಟೂರ್ನಿಯ ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ತಾ. ೨೨ ರಂದು (ಇಂದು) ನಡೆಯಲಿದೆ.

೬ ತಂಡಗಳನ್ನು ಒಳಗೊಂಡ ಟೂರ್ನಿಯು ಲೀಗ್ ಮಾದರಿಯಲ್ಲಿ ನಡೆದು ಪ್ರತಿ ತಂಡವು ತಲಾ ೪ ಪಂದ್ಯಗಳನ್ನು ಆಡಿದೆ. ಅಗ್ರಸ್ಥಾನದಲ್ಲಿರುವ ಮ್ಯಾಕ್ಸ್ವೆಲ್ ತಂಡ ನೇರ ಫೈನಲ್ ಪ್ರವೇಶ ಪಡೆದುಕೊಂಡಿದೆ.

೨ ಹಾಗೂ ೩ನೇ ಸ್ಥಾನಗಳನ್ನು ಪಡೆದಿರುವ ಕರವಲೆ ಭಗವತಿ ಹಾಗೂ ಕಿಂಬರ್ಲಿ ತಂಡಗಳ ನಡುವೆ ಇಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ವಿಜೇತ ತಂಡ ಮ್ಯಾಕ್ಸ್ ವೆಲ್ ತಂಡದೊAದಿಗೆ ಫೈನಲ್ ಆಡಲಿದೆ.

ತಾ. ೨೧ ರಂದು ನಡೆದ ಮೊದಲನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮ್ಯಾಕ್ಸ್ ವೆಲ್ ತಂಡ ೧೦ ಓವರ್ ಗಳಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ೬೫ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕಿಂಬರ್ಲಿ ಟಿ -೧೦ ತಂಡ ೮.೪ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ೬೬ ರನ್ ಗಳಿಸಿ ಜಯ ಸಾಧಿಸಿತು. ೨ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀ ಕೋಟೆ ಮಹಾಗಣಪತಿ ತಂಡ ೧೦ ಓವರ್‌ಗಳಲ್ಲಿ ೫ ವಿಕೆಟ್‌ಗಳ ನಷ್ಟಕ್ಕೆ ೯೦ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕರವಲೆ ಭಗವತಿ ತಂಡ ೧೦ ಓವರ್‌ಗಳಲ್ಲಿ ೭ ವಿಕೆಟ್‌ಗಳ ನಷ್ಟಕ್ಕೆ ೮೮ ರನ್ ಗಳಿಸಿ ೨ ರನ್‌ಗಳಿಂದ ಸೋಲು ಅನುಭವಿಸಿತು.

೩ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಪೋರ್ಟ್ಸ್ ವರ್ಲ್ಡ್ ತಂಡ ೯ ವಿಕೆಟ್‌ಗಳ ನಷ್ಟಕ್ಕೆ ೭೮ ರನ್ ಗಳಿಸಿತು. ಈ ಮೊತ್ತವನ್ನು ಕಿಂಬರ್ಲಿ ತಂಡ ೮.೪ ಓವರ್‌ಗಳಲ್ಲಿ ೩ ವಿಕೆಟ್‌ಗಳ ನಷ್ಟಕ್ಕೆ ಬೆನ್ನಟ್ಟಿ ವಿಜೇತ ತಂಡವಾಗಿ ಹೊರಹೊಮ್ಮಿತು.