ಶ್ರೀಮಂಗಲ, ಜ. ೨೦: ಇಲ್ಲಿನ ಜೇ.ಸಿ. ವಿದ್ಯಾಸಂಸ್ಥೆಯ ೩೩ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ವೈದ್ಯರಾದ ಅಮೃತ್ ನಾಣಯ್ಯ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಾವಿನ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರಲ್ಲದೆ ಪೋಷಕರಿಗೂ ಶಿಕ್ಷಕರಿಗೂ ತಮ್ಮ ಅನುಭವದ ಮೂಲಕ ಜ್ಞಾನದ ಬೆಳಕನ್ನು ಚೆಲ್ಲಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಅವರು ಸಮಯದ ಮಹತ್ವವನ್ನು ಅರಿತು ಶ್ರದ್ಧೆಯನ್ನು ಹೆಚ್ಚಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೋಟ್ರಂಗಡ ಸುಬ್ರಮಣಿ, ಕರೆಸ್ಪಾಂಡೆAಟ್ ಮಚ್ಚಾಮಡ ಸುರೇಶ್, ಆಡಳಿತಾಧಿಕಾರಿ ಕೋಟ್ರಂಗಡ ತಿಮ್ಮಯ್ಯ, ಟ್ರಸ್ಟಿಗಳಾದ ಕೋಟ್ರಂಗಡ ಯಶೋಧ, ಕೋಟ್ರಂಗಡ ಸುನಿಲ್ ಸುಬ್ಬಯ್ಯ, ಮಚ್ಚಮಾಡ ಅಪ್ಪಣ್ಣ, ಮುಖ್ಯ ಶಿಕ್ಷಕರುಗಳಾದ ಎನ್.ಬಿ. ಸತೀಶ್ ಹಾಗೂ ಕೆ.ಕೆ. ಸಿಂಧೂ ಉಪಸ್ಥಿತರಿದ್ದರು. ಕೋಟ್ರಂಗಡ ತಿಮ್ಮಯ್ಯ ಸ್ವಾಗತಿಸಿದರು. ನಂತರ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಶಿಕ್ಷಕ ವೃಂದದವರು ಕಾರ್ಯ ಕ್ರಮವನ್ನು ನಿರ್ವಹಿಸಿದರು. ಸಹ ಶಿಕ್ಷಕರಾದ ಪ್ರಸನ್ನ ಹಾಗೂ ಚಂಚಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಹ ಶಿಕ್ಷಕರಾದ ಬಿಂದುಸಾರ ವಂದಿಸಿದರು.