ಕೂಡಿಗೆ, ಜ. ೨೧: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಕಳೆದ ಎರಡು ಮಾಸಿಕ ಸಭೆಯಲ್ಲಿ ಕೆಲ ಸದಸ್ಯರು ಸಭಾತ್ಯಾಗ ಮಾಡಿದ ಹಿನ್ನೆಲೆ ಸಭೆಯನ್ನು ಮುಂದೂಡಲಾಯಿತು.
ಮೂರನೇ ಬಾರಿಯ ಸಭೆ ೮ ಜನ ಸದಸ್ಯರು ಭಾಗವಹಿಸದೆ ಸಭಾತ್ಯಾಗ ಮಾಡಿದ ಹಿನ್ನೆಲೆ ಈ ಬಾರಿಯೂ ರದ್ದುಗೊಂಡಿತು.
ಕಳೆದ ಎರಡೂ ಸಭೆಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೫ನೇ ಹಣಕಾಸು ಮತ್ತು ಗ್ರಾಮ ಪಂಚಾಯಿತಿಯ ಅನುದಾನವನ್ನು ಬಳಕೆ ಮಾಡಿ ನಡೆದ ಕಾಮಗಾರಿಯ ಬಿಲ್ಗಳಿಗೆ ಅಧ್ಯಕ್ಷರು ಸಹಿ ಮಾಡುತ್ತಿಲ್ಲ ಮತ್ತು ಕಾಮಗಾರಿಗಳು ನಡೆದು ಮೂರು ತಿಂಗಳುಗಳು ಕಳೆದರೂ ಸಹ ಕಾಮಗಾರಿಯನ್ನು ಸಂಬAಧಿಸಿದ ಇಂಜಿನಿಯರ್ ಮತ್ತು ಅಭಿವೃದ್ಧಿ ಅಧಿಕಾರಿಯೊಂದಿಗೆ ವೀಕ್ಷಣೆ ಮಾಡಿ ನಂತರ ಕಾಮಗಾರಿಯ ಬಗ್ಗೆ ಅಭಿಪ್ರಾಯ, ಅಲ್ಲದೆ ಬಿಲ್ಗೆ ಸಹಿ ಮಾಡಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್, ಅನಂತ್ ಚಂದ್ರು, ಶಿವಕುಮಾರ್, ವಾಣಿ, ಜಯಶ್ರೀ ಸಭಾತ್ಯಾಗ ಮಾಡಿದರು.
ಅಧ್ಯಕ್ಷೆ ಮಂಗಳಾ ಪ್ರಕಾಶ್ ಸಭೆಯನ್ನು ನಡೆಸೋಣ ನಂತರ ಕಾಮಗಾರಿಯನ್ನು ವೀಕ್ಷಣೆ ಮಾಡಿ ಸಹಿ ಮಾಡುತ್ತೇವೆ ಎಂದರು. ಇದಕ್ಕೆ ಒಪ್ಪಂದ ಕೆಲ ಸದಸ್ಯರು ಸಭೆಯಿಂದ ಹೊರನಡೆದರು. ಸಭೆಗೆ ಬಹುಮತ ಇಲ್ಲದೆ ಕಾರಣದಿಂದಾಗಿ ಸಭೆಯನ್ನು ಮುಂದೂಡಲಾಯಿತು.
ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರ - ಅಧ್ಯಕ್ಷರ ನಡುವಿನ ಹೊಂದಾಣಿಕೆ ಇಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಯ ಎಲ್ಲಾ ಕಾಮಗಾರಿಗಳು ಸ್ಥಗಿತಗೊಳ್ಳುತ್ತಿವೆ. ಅಲ್ಲದೆ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಯ ಕ್ರಿಯಾ ಚಟುವಟಿಕೆಗಳು ನಡೆಯುತ್ತಿಲ್ಲ. ಸಾರ್ವಜನಿಕ ಅರ್ಜಿಗಳ ವಿಲೇವಾರಿ ಆಗದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ತೊಂದರೆ ಆಗುತ್ತಿವೆ. ಗ್ರಾಮಸ್ಥರು ಮನೆ ನಿರ್ಮಾಣಕ್ಕೆ ಸಂಬAಧಿಸಿದ ಅರ್ಜಿಗಳಾಗಲಿ, ಇತರ ಸಂಬAಧಿಸಿದ ದೃಢೀಕರಣ ಪತ್ರಗಳು ಸಹ ಸಭೆ ನಡೆಯದೆ ಗ್ರಾಮಸ್ಥರಿಗೆ ಸಿಗುತ್ತಿಲಾ, ಇದರಿಂದಾಗಿ ಅನೇಕ ಗ್ರಾಮಸ್ಥರು ಪ್ರತಿದಿನ ಪಂಚಾಯಿತಿಗೆ ಅಲೆಯುವಂತ ಪ್ರಸಂಗ ಎದುರಾಗುತ್ತಿದೆ.