ವೀರಾಜಪೇಟೆ, ಜ. ೨೦: ತಾ. ೨೬ ರಂದು ಗಣರಾಜ್ಯೋತ್ಸವ ದಿನದ ಅಂಗವಾಗಿ ಮಾಜಿ ಸೈನಿಕರ ಸಹಕಾರ ಸಂಘ, ಲಯನ್ಸ್ ಕ್ಲಬ್ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವೀರಾಜಪೇಟೆ ಮೂರ್ನಾಡು-ಮಡಿಕೇರಿ ರಸ್ತೆಗೆ ಮಹಾವೀರಚಕ್ರ ಕರ್ನಲ್ ಪುಟ್ಟಿಚಂಡ ಗಣಪತಿ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಅವರು ೧೯೮೮ ರಲ್ಲಿ ಶ್ರೀಲಂಕಾದಲ್ಲಿ ಎಲ್.ಟಿ.ಟಿ. ಜೊತೆ ನಡೆದ ಸಂಘರ್ಷದಲ್ಲಿ ಶಾಂತಿ ಪಾಲನಾ ಪಡೆಯ ಭಾರತದ ಸೇನೆಯ ನೇತೃತ್ವ ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ಮಹಾವೀರ ಚಕ್ರ ನೀಡಿ ಗೌರವಿಸಿದೆ.
ಸ್ಕಾ÷್ವರ್ಡನ್ ಲೀಡರ್ ಅಜ್ಜಮಾಡ ದೇವಯ್ಯ ಅವರನ್ನು ಹೊರತುಪಡಿಸಿದರೆ ಕರ್ನಲ್ ಪುಟ್ಟಿಚಂಡ ಗಣಪತಿ ಮಹಾವೀರ ಚಕ್ರ ಪಡೆದಿರುವ ಎರಡನೆಯವರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಮೂರ್ನಾಡು ರಸ್ತೆಗೆ ನಾಮಕರಣ ಮಾಡುವ ಸಂದರ್ಭ ಎಲ್ಲಾ ಮಾಜಿ ಸೈನಿಕರು ಹಾಜರಿದ್ದು ಸಹಕರಿಸುವಂತೆ ಕೋರಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪುಗ್ಗೆರ ನಂದಾ, ನಿರ್ದೇಶಕರುಗಳಾದ ಪಟ್ರಪಂಡ ರಮೇಶ್ ಕರುಂಬಯ್ಯ, ರಾಜ ಚಂದ್ರಶೇಖರ್, ಚೆಂದAಡ ಕಾರ್ಯಪ್ಪ, ಹೆಚ್.ಕೆ. ಅಪ್ಪಯ್ಯ, ಮುಂಡ್ಯೋಳAಡ ಸುರೇಶ್ ಉಪಸ್ಥಿತರಿದ್ದರು.