ಮಡಿಕೇರಿ, ಜ. ೨೦: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗದ ಹಾಕತ್ತೂರು ಹಿರಿಯ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು ಉಪ ವಿಭಾಗದ ದೇವರಪುರ ಗ್ರಂಥಾಲಯ ಗ್ರಾ.ಪಂ.ಸಭಾAಗಣದಲ್ಲಿ, ವೀರಾಜಪೇಟೆ ಉಪ ವಿಭಾಗದ ತೋರ ಕೆದಮುಳ್ಳೂರು ಗ್ರಾಮದ ಕೆದಮುಳ್ಳೂರು ತೋಮರ ಸಮುದಾಯ ಭವನ, ಕುಶಾಲನಗರ ಉಪ ವಿಭಾಗದ ವಾಲ್ನೂರು ತ್ಯಾಗತ್ತೂರು ಸೊಸೈಟಿ ಸಮುದಾಯ ಭವನ ಹಾಗೂ ಸೋಮವಾರಪೇಟೆ ಉಪ ವಿಭಾಗದ ಕಣಗಾಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೧ ರಂದು (ಇಂದು) ಬೆಳಿಗ್ಗೆ ೧೧ ಗಂಟೆಯಿAದ ವಿದ್ಯುತ್ ಅದಾಲತ್ ನಡೆಯಲಿದೆ.
ಆದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳÀನ್ನು ಸಲ್ಲಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಬಾಯಿ ಕೋರಿದ್ದಾರೆ.