ಮಡಿಕೇರಿ, ಜ. ೧೯ : ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದÀ ಆಶ್ರಯದಲ್ಲಿ ೧೦ ಕುಟುಂಬ ೧೮ ಗೋತ್ರದ ಜನಾಂಗ ದವರನ್ನು ಸೇರಿಸಿ ಸಂತೋಷ ಕೂಟ ಹಾಗೂ ಹೊಸ ವರ್ಷ ಆಚರಣೆಯ ಸಮಾರಂಭವನ್ನು ಕೊಡಗು ಗೌಡ ಸಮಾಜ ಮೈಸೂರಿನ ಸಭಾಂಗಣದಲ್ಲಿ ನೆರವೇರಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಶಾಸಕ ಎಲ್. ನಾಗೇಂದ್ರ, ಮಾಜಿ ಶಾಸಕ ವಾಸು, ಸಮಾಜದ ಅಧ್ಯಕ್ಷ ತೋಟಂಬೈಲು ಈ. ಮನೋಹರ್, ನಗರ ಪಾಲಿಕೆ ಸದಸ್ಯ ಶ್ರೀಧರ್, ಕರ್ನಲ್ ಲೋಕನಾಥ್ ಇವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಸೈನಿಕ ಹಾಗೂ ಮಾಜಿ ಸೈನಿಕ ಒಂದೇ ನಾಣ್ಯದ ೩ ಮುಖಗಳು. ಎಲ್ಲರೂ ಶಿಸ್ತಿನಿಂದ ಎಲ್ಲರನ್ನು ಸೇರಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿರುವದು ಶ್ಲಾಘನೀಯವೆಂದು ಹೇಳಿದರು. ಮುಂದಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸಹಕರಿಸುವದಾಗಿ ಹೇಳಿದರು. ಹಿರಿಯ ನಾಗರಿಕರು ಹಾಗೂ ಜನಾಂಗದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸ ಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಅಂಕಗಳಿಸಿ ರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಂಕರನ ದೇವಯ್ಯ ಪ್ರಾರ್ಥಿಸಿ, ವಂದಿಸಿದರು.