ಒಡಿಶ್ಶಾ, ಜ. ೧೯: ಒಡಿಶ್ಶಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪುರುಷರ ಹಾಕಿಯಲ್ಲಿ ಭಾರತವು, ಗ್ರೂಪ್ ಮಟ್ಟದ ಕೊನೆಯ ಪಂದ್ಯದಲ್ಲಿ ವೇಲ್ಸ್ ವಿರುದ್ಧ ೪-೨ ಗೋಲುಗಳ ಮೂಲಕ ಜಯ ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಈ ಹಿಂದೆ ಸ್ಪೇನ್ ವಿರುದ್ಧ ೨-೦ ಗೋಲು ಹಾಗೂ ಇಂಗ್ಲೆAಡ್ ವಿರುದ್ಧ ೦-೦ ಸಮಬಲ ಸಾಧಿಸಿದ್ದ ಭಾರತ ಗ್ರೂಪ್ ಡಿಯಲ್ಲಿ ೨ನೇ ಸ್ಥಾನ ಪಡೆದುಕೊಂಡಿದೆ. ಇಂಗ್ಲೆAಡ್ ಹಾಗೂ ಭಾರತದ ಅಂಕಗಳು ಒಂದೇ ಆಗಿದ್ದರೂ ಗೋಲ್ ‘ಡಿಫರೆನ್ಸ್’ ಆಧಾರದಲ್ಲಿ ಇಂಗ್ಲೆAಡ್ ಅಗ್ರಸ್ಥಾನ ಪಡೆದುಕೊಂಡು ಕ್ವಾರ್ಟರ್ ಫೈನಲ್ಗೆ ನೇರ ಪ್ರವೇಶ ಪಡೆದುಕೊಂಡಿದೆ. ಭಾರತವು ತಾ.೨೨ ರಂದು ಗ್ರೂಪ್ ಸಿನಲ್ಲಿ ೩ನೇ ಸ್ಥಾನ ಪಡೆದಿರುವ ನ್ಯೂಜಿಲ್ಯಾಂಡ್ ವಿರುದ್ಧ ಸೇಣಸಾಡಲಿದ್ದು, ಗೆದ್ದರೆ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಲಿದೆ.