ಮಡಿಕೇರಿ, ಜ. ೧೯: ಭಾರತಿಯ ಜನತಾ ಪಕ್ಷದ ವತಿಯಿಂದ ತಾ. ೨೧ ರಿಂದ ೨೯ರ ವರೆಗೆ ಬೂತ್ ವಿಜಯ ಸಂಕಲ್ಪ ಅಭಿಯಾನ ಏರ್ಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಕಳೆದ ತಾ.೨ರಿಂದ ೧೨ರವರೆಗೆ ರಾಜ್ಯದಾದ್ಯಂತ ಬೂತ್ ವಿಜಯ ಅಭಿಯಾನ ಕೈಗೊಳ್ಳಲಾಗಿದ್ದು, ಬಹತೇಕ ಯಶಸ್ವಿಯಾಗಿದೆ. ಎಲ್ಲ ಬೂತ್‌ಗಳ ಪರಿಷ್ಕರಣೆ, ಪೇಜ್ ಪ್ರಮುಖರ ಸಮಿತಿ ರಚನೆ ಮಾಡಲಾಗಿದೆ. ಇದೀಗ ರಾಜ್ಯದಾದ್ಯಂತ ತಾ. ೨೧ ರಿಂದ ೨೯ರ ವರೆಗೆ ವಿಜಯ ಸಂಕಲ್ಪ ಅಭಿಯಾನ ಆರಂಭಿಸಲಾಗಿದೆ. ಎಲ್ಲ ಮತದಾರರ ಮನೆ ಮನೆಗಳಿಗೆ ತೆರಳಿ ಜಿಲ್ಲೆ, ರಾಜ್ಯ, ಕೇಂದ್ರ ಸರಕಾರದ ಯೊಜನೆಗಳನ್ನು ತಲುಪಿಸುವ ಕಾರ್ಯ ಮಾಡಲಿದ್ದೇವೆ. ಕೊಡಗು ಜಿಲ್ಲೆಯ ಎಲ್ಲ ೫೪೩ ಬೂತ್‌ಗಳಲ್ಲಿಯೂ ಅಭಿಯಾನ ನಡೆಯಲಿದ್ದು, ಪ್ರತಿ ಬೂತ್‌ನಲ್ಲಿ ೧೦ ಗೋಡೆಗಳಲ್ಲಿ ಸರಕಾರದ ಯಾವದಾದರೂ ಒಂದು ಯೋಜನೆಗಳ ಬಗ್ಗೆ ಗೋಡೆ ಬರಹಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವದು. ಬಿಜೆಪಿ ಸರಕಾರ ಬಂದ ಬಳಿಕ ಪ್ರತಿಯೋರ್ವ ಪ್ರಜೆಯೂ ಸರಕಾರದ ಸೌಲಭ್ಯ ಪಡೆದುಕೊಂಡ ಫಲಾನುಭವಿಯಾಗಿದ್ದಾನೆ. ಕೃಷಿಕರ ಬೆಳೆ ಪರಿಹಾರ ಯೋಜನೆ ಒಂದು ಇತಿಹಾಸ ನಿರ್ಮಾಣ ಮಾಡಿದೆ, ಪ್ರತಿಯೊಬ್ಬ ಭಾರತೀಯನ ಜೀವನದ ಮೇಲೆ ಸರಕಾರದ ಕಾರ್ಯಕ್ರಮದ ಪ್ರಯೋಜನದ ಬಗ್ಗೆ ಮನನ ಮಾಡಲಾಗುವದು. ಪ್ರತಿ ಬೂತ್‌ಗಳಲ್ಲಿ ಡಿಜಿಟಲೀಕರಣ ವ್ಯವಸ್ಥೆ ಮಾಡಲಾಗಿದ್ದು, ವ್ಯಾಟ್ಸಪ್ ಗ್ರೂಪ್‌ಗಳನ್ನು ರಚನೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಪ್ರತಿ ಮನೆ ಹಾಗೂ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಲಾಗುವುದು ಎಂದು ತಿಳಿಸಿದರು.
ಕೋಟಿ ಸದಸ್ಯತ್ವ ಅಭಿಯಾನ
ಈ ಬಾರಿ ರಾಜ್ಯದಲ್ಲಿ ಒಂದು ಕೋಟಿ ಹೊಸ ಸದಸ್ಯತ್ವ ನೋಂದಣಿ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್‌ನಲ್ಲಿ ಲಿಂಕ್ ಮೂಲಕ ಎಲ್ಲರಿಗೂ ತಲಪಿಸುವ
(ಮೊದಲ ಪುಟದಿಂದ) ವ್ಯವಸ್ಥೆ ಮಾಡಲಾಗುವದು. ಸಮಾಜದ ಕಟ್ಟ ಕಡೆಯ ಪ್ರಜೆಗೂ ಸರಕಾರದ ಯೋಜನೆಗಳನ್ನು ತಲಪಿಸುವ ನಿಟ್ಟಿನಲ್ಲಿ ಪ್ರತಿ ಬೂತ್‌ನಲ್ಲಿ ಪ್ರತಿ ಪೇಜ್ ಸಮಿತಿಯಲ್ಲಿ ಐದು ಮಂದಿಯ ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದ್ದು, ಅವರುಗಳು ಪ್ರಜೆಗಳ ನಿರಂತರ ಸಂಪರ್ಕದೊAದಿಗೆ ಯೋಜನೆಗಳನ್ನು ತಲಪಿಸುವ ವ್ಯವಸ್ಥೆ ಮಾಡಲಿದ್ದಾರೆ.
ರಾಜ್ಯದ ಪ್ರತಿ ಮನೆಗಳು ಬಿಜೆಪಿ ಮನೆಯಾಗಬೇಕೆಂಬ ಉದ್ದೇಶ ಹೊಂದಲಾಗಿದ್ದು, ಬಹುತೇಕ ಹತ್ತಿರವಾಗಿದ್ದೇವೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜಯಗಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಚುನಾವಣೆಗೆ ಪರೋಕ್ಷವಾಗಿ ತಯಾರಾಗಿದ್ದೇವೆ, ಯಾವುದೇ ಸಮಯದಲ್ಲೂ ಚುನಾವಣೆ ಎದುರಾದರೂ ಎದುರಿಸಲು ಪ್ರತಿ ಬೂತ್ ಮಟ್ಟದಲ್ಲಿ ಸಿದ್ಧರಿರುವದಾಗಿ ರಾಬಿನಿ ತಿಳಿಸಿದರು.
ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ತಾ. ೨೧ ರಿಂದ ಅಭಿಯಾನ ಆರಂಭಗೊಳ್ಳಲಿದ್ದು, ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೀರಾಜಪೇಟೆಯಲ್ಲಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಶಾಸಕರುಗಳು, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ರಾಬಿನ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ, ಕನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಡಾ. ಬಿ.ಸಿ. ನವೀನ್‌ಕುಮಾರ್, ಸಹ ಸಂಚಾಲಕಿ ಯಮುನಾ ಚಂಗಪ್ಪ, ಸಹ ವಕ್ತಾರ ಶಜೀಲ್ ಕೃಷ್ಣನ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್ ಇದ್ದರು.