*ಗೋಣಿಕೊಪ್ಪ, ಜ. ೧೯: ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಸೆಲ್ಫಿ ಆವರಣದಲ್ಲಿ ಸೆಲ್ಫಿ ತೆಗೆದು ಸಂಭ್ರಮಿಸುವುದರ ಜತೆಗೆ ವಿದ್ಯಾರ್ಥಿಗಳ ನೃತ್ಯಗಳು ಗೋಣಿಕೊಪ್ಪ ಸರ್ಕಾರಿ ಶಾಲೆಯ ಆವರಣಕ್ಕೆ ರಂಗನ್ನು ತುಂಬಿತು.

ಗೋಣಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಸೆಲ್ಫಿ ಆವರಣ ಪ್ರತಿಯೊಬ್ಬರನ್ನು ಗಮನ ಸೆಳೆದರೆ, ಜಾನಪದ, ಭಕ್ತಿಸಾರ, ಚಲನಚಿತ್ರ ಗೀತೆಗಳಿಗೆ ವಿದ್ಯಾರ್ಥಿಗಳ ತಂಡ ನೃತ್ಯ ಮಾಡಿ ನೆರೆದವರನ್ನು ಮೋಡಿ ಮಾಡಿದರು.

ಒಂದರಿAದ ಎಂಟನೆ ತರಗತಿಯ ವಿದ್ಯಾರ್ಥಿಗಳು ಸುಮಾರು ೧೫ಕ್ಕೂ ಹೆಚ್ಚು ಗೀತೆಗಳಿಗೆ ನೃತ್ಯ ಮಾಡಿದರು. ನಂತರ ಕ್ರೀಡಾ ಚಟುವಟಿಕೆ, ಚಿತ್ರಕಲೆ, ಅತ್ಯುತ್ತಮ ವಿದ್ಯಾರ್ಥಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದ ರೊಂದಿಗೆ ವಿವಿಧ ಪ್ರೋತ್ಸಾಹ ಬಹುಮಾನವನ್ನು ಪಡೆದುಕೊಂಡರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾದ ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ಜಪ್ಪೆಕೊಡಿ ಸುಭಾಷಿಣಿ, ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಅಮ್ಮಂಡ ಚಿಣ್ಣಪ್ಪ, ಗ್ರಾ.ಪಂ. ಸದಸ್ಯರುಗಳಾದ ಕೊಣಿಯಂಡ ಬೋಜಮ್ಮ, ಬಿ.ಎನ್. ಪ್ರಕಾಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶಾಂತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ ಮೋಹನ್, ಪ್ರಮೋದ್ ಕಾಮತ್, ಶಾಲಾ ಮುಖ್ಯೋಪಾಧ್ಯಾಯ ಹೆಚ್. ಕೆ ಕುಮಾರ್ ಉಪಸ್ಥಿತಿಯಲ್ಲಿ ಗಿಡಕ್ಕೆ ನೀರು ಹಾಯಿಸುವ ಮೂಲಕ ಸಾಂಸ್ಕöÈತಿಕ ವೇದಿಕೆಗೆ ಚಾಲನೆ ನೀಡಿದರು.

ಕಲಾ ಶಿಕ್ಷಕ ಬಿ.ಆರ್. ಸತೀಶ್, ದೈಹಿಕ ಶಿಕ್ಷಕ ಟಿ.ಡಿ. ರಮಾನಂದ, ಶಿಕ್ಷಕರುಗಳಾದ ಹೆಚ್.ಇ. ಅನಿತಾ ಕುಮಾರಿ, ಎ.ಎನ್ ದಮಯಂತಿ, ಕೆ.ಎ. ಸರಸ್ವತಿ, ಬಿ.ಎನ್. ನಿರ್ಮಲ, ಎಂ.ಟಿ ಜೋಸ್ಲಿಯಾ, ಎನ್.ಕೆ. ಜಯಶ್ರೀ, ಎಂ.ಸಿ. ಇಂದಿರಾ, ಕೆ.ಎಂ. ತ್ರಿವೇಣಿ, ಕೆ.ಎಸ್. ಶಾರದ, ಕವನ, ಸಿಮ್ನ, ಗೌತಮಿ, ರೀಟಾ, ನರ್ಸರಿ ಶಿಕ್ಷಕಿ ಪೂಜಾ ಮತ್ತು ಮಿಟ್ಟು ವಾರ್ಷಿಕೋತ್ಸವದ ಉತ್ಸವವನ್ನು ನಿಭಾಯಿಸಿದರು.