ಗೋಣಿಕೊಪ್ಪಲು, ಜ. ೧೯ : ಕೊಡಗಿನ ಪ್ರಖ್ಯಾತ ಜಲಪಾತಗಳಲ್ಲಿ ಒಂದಾದ ದ. ಕೊಡಗಿನ ಶ್ರೀಮಂಗಲದ ಇರ್ಪು ಜಲಪಾತ ವೀಕ್ಷಣೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ಸರ್ಕಾರದ ಹಾಗೂ ಯಾವುದೇ ಪ್ರಾಧಿಕಾರದ ಪೂರ್ವನುಮತಿ ಪಡೆಯದೆ ಸ್ಥಳೀಯ ದೇವಸ್ಥಾನದ ಹೆಸರಿನಲ್ಲಿ ಶುಲ್ಕ ಸಂಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ದಿಢೀರ್ ಭೇಟಿ ನೀಡಿ ಸಂಬAಧಿಸಿದವರಿAದ ರಶೀದಿ ಪುಸ್ತಕವನ್ನು ವಶಕ್ಕೆ ಪಡೆದರು.
ಇರ್ಪು ಜಲಪಾತ ವೀಕ್ಷಣೆಗೆ ಹಾಗೂ ವಾಹನ ನಿಲುಗಡೆಗೆ ನಿಯಮ ಬಾಹಿರವಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆ ತಾಲೂಕು ತಹಶೀಲ್ದಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕನ ಮಾಡಿದ ಸಂದರ್ಭ ಸಂಬAಧಪಟ್ಟ ಪ್ರಾಧಿಕಾರದ ಯಾವುದೇ ಅನುಮತಿ ಇಲ್ಲದೇ ಶುಲ್ಕ ಸಂಗ್ರಹ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕರು ಇನ್ನೂ ಮುಂದೆ ಜಲಪಾತ ವೀಕ್ಷಣೆಗೆ ಹಾಗೂ ವಾಹನ ನಿಲುಗಡೆ ಯಾವುದೇ ಶುಲ್ಕ ನೀಡದಂತೆ ಅವರು, ಸ್ಥಳದಲ್ಲಿ ಶುಲ್ಕ ವಸೂಲಿ ಮಾಡಿದ್ದಲ್ಲಿ ತನಗೆ ಮಾಹಿತಿ ನೀಡುವಂತೆ ಸ್ಪಷ್ಟನೆ ಕೋರಿದರು. ಸರ್ಕಾರದ ಪೂರ್ವನುಮತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ತಯಾರಿ ನಡೆಸುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್ ಪ್ರಶಾಂತ್ ಈ ಬಗ್ಗೆ ಸಂಬAಧಿಸಿದವರಿಗೆ ಎಚ್ಚರಿಕೆ ನೀಡಿ,ಯಾವುದೇ ಕಾಮಗಾರಿ ಕೈಗೊಳ್ಳದಿರಲು ನಿರ್ದೇಶನ ನೀಡಿದ್ದಾರೆ. ಭೇಟಿಯ ವೇಳೆ ಶ್ರೀಮಂಗಲ ಹೋಬಳಿಯ ಕಂದಾಯ ಪರಿವೀಕ್ಷಕರು, ಉಪ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.