ಸೋಮವಾರಪೇಟೆ, ಜ. ೧೯: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ೬೪ನೇ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆಸಲಾದ ಅಂತರ ಜಿಲ್ಲಾ ಮಟ್ಟದ ಮ್ಯಾಟ ಕಬಡ್ಡಿ ಪಂದ್ಯಾಟದಲ್ಲಿ ಕೊಡಗು ಒಕ್ಕಲಿಗರ ಯುವ ವೇದಿಕೆ ತಂಡ ಪ್ರಥಮ ಸ್ಥಾನ ಗಳಿಸಿತು.
ತೋಳೂರುಶೆಟ್ಟಳ್ಳಿಯ ವಿನಯ್ ಫ್ರೆಂಡ್ಸ್ ತಂಡವನ್ನು ಫೈನಲ್ನಲ್ಲಿ ಮಣಿಸುವ ಮೂಲಕ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ವಿನಯ್ ಫ್ರೆಂಡ್ಸ್ ತಂಡವು ೩೦ ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು.
ಪಂದ್ಯಾವಳಿಯಲ್ಲಿ ತೃತೀಯ ಸ್ಥಾನವನ್ನು ನಗರಳ್ಳಿ ಎಸ್ಎಸ್ಪಿ ತಂಡ, ನಾಲ್ಕನೇ ಸ್ಥಾನವನ್ನು ಶ್ರೀಕುಮಾರಲಿಂಗೇಶ್ವರ ಯುವಕ ಸಂಘ-ಶಾAತಳ್ಳಿ ಪಡೆಯಿತು.
ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಸುಳ್ಯದ ನಾಗಶ್ರೀ ತಂಡ ಪ್ರಥಮ ಹಾಗೂ ಹುಣಸೂರಿನ ಸಂತ ಜೋಸೆಫರ ತಂಡ ದ್ವಿತೀಯ ಸ್ಥಾನ ಪಡೆದವು. ವಾಲಿಬಾಲ್ ಪಂದ್ಯಾಟದಲ್ಲಿ ಶನಿವಾರಸಂತೆಯ ರಕ್ಷಿತ್ ತಂಡ ಪ್ರಥಮ ಹಾಗೂ ತಲ್ತರೆಯ ನವರತ್ನ ಯುವಕ ಸಂಘ ದ್ವಿತೀಯ ಸ್ಥಾನ ಪಡೆದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ, ಉಪಾಧ್ಯಕ್ಷ ಕೆ.ಜಿ. ಅನಿಲ್, ಕಾರ್ಯದರ್ಶಿ ಕೆ.ಟಿ. ಅಶ್ವಥ್, ಖಜಾಂಚಿ ಕಿರಣ್ಕುಮಾರ್, ನಿರಂಜನ್, ಪ್ರೇಮ್ಸಾಗರ್ ಅವರುಗಳು ಉಪಸ್ಥಿತರಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.