ಮಡಿಕೇರಿ, ಜ. ೧೯: ಜಿಲ್ಲೆಯ ಮೂಲದ ನಟಿ ಹಾಗೂ ರೂಪದರ್ಶಿ ಉಳ್ಳಿಯಡ ಶುಭ್ರ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ದೊಡ್ಡಮನೆ ವಿಶಾಲ್ ಶಿವಪ್ಪ ಅವರನ್ನು ವರಿಸಲಿದ್ದಾರೆ.

ಶುಭ್ರ ಅವರು ಉಳ್ಳಿಯಡ ವಿದ್ವತ್ ಅಯ್ಯಪ್ಪ ಹಾಗೂ ಚಿತ್ರ ದಂಪತಿ ಪುತ್ರಿಯಾಗಿದ್ದು, ವಿಶಾಲ್ ಸುಂಟಿಕೊಪ್ಪದ ವಿನೋದ್ ಶಿವಪ್ಪ ಹಾಗೂ ಕವಲ್ ಅವರ ಪುತ್ರನಾಗಿದ್ದಾರೆ. ತಾ. ೨೧ ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.

ಶಿವರಾಜ್‌ಕುಮಾರ್ ಅಭಿನಯದ ವಜ್ರಕಾಯ ಸಿನಿಮಾದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ಶುಭ್ರ ಆ ಬಳಿಕ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ‘ರಾಮನ ಅವಾತರ’ ಚಿತ್ರ ಬಿಡುಗಡೆಗೆ ತಯಾರಾಗಿದೆ.