ಮಡಿಕೇರಿ, ಜ. ೧೯: ವೈಲ್ಡ್ ಮಾಸ್ಟರ್ಸ್ ಕೊಡಗು ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೩ನೇ ಆವೃತ್ತಿಯ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೨ನೇ ದಿನದ ಪಂದ್ಯಾಟದ ಮೊದಲನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ಕೋಟೆ ಮಹಾಗಣಪತಿ ತಂಡವು ನಿಗದಿತ ೧೦ ಓವರ್‌ಗಳಲ್ಲಿ ೫ವಿಕೆಟ್‌ಗಳ ನಷ್ಟಕ್ಕೆ ೯೦ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಧಾರ್ಮಿಕ್ ಟಿ ೧೦ ತಂಡವು ೧೦ ಓವರ್‌ಗಳಲ್ಲಿ ೬ ವಿಕೆಟ್‌ಗಳನ್ನು ಕಳೆದುಕೊಂಡು ೮೨ ರನ್ ಗಳನ್ನಷ್ಟೇ ಸಾಧಿಸಲು ಸಫಲವಾಗಿ ಸೋಲನುಭವಿಸಿತು.
೨ನೇ ಪಂದ್ಯದಲ್ಲಿ ಮ್ಯಾಕ್ ವೆಲ್ ಟಿ-೧೦ ತಂಡವು ೧೦ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ೧೦೫ ರನ್ ಗಳಿಸಿತು. ಈ ಮೊತ್ತವನ್ನು ಸಾಧಿಸಲು ಪ್ರಯತ್ನಿಸಿದ ಕರವಲೆ ಭಗವತಿ ತಂಡವು ೫ ವಿಕೆಟ್ ಗಳಿಗೆ ೯೯ ರನ್ ಗಳಿಸಿ ೬ ರನ್ ಗಳಿಂದ ಸೋಲ ಅನುಭವಿಸಿತು.
೩ನೇ ಪಂದ್ಯಾಟದಲ್ಲಿ ಸ್ಪೋರ್ಟ್ಸ್ ವರ್ಲ್ಡ್ ತಂಡವು ೧೦ ಓವೆರ್‌ಗಳಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ೭೨ ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಧಾರ್ಮಿಕ್ ಟಿ ೧೦ ತಂಡವು ೯.೪ ಓವರ್‌ಗಳಲ್ಲಿ ೭ ವಿಕೆಟ್‌ಗಳ ನಷ್ಟಕೆ ೭೫ ರನ್‌ಗಳಿಸಿ ಜಯ ಸಾಧಿಸಿತು.