ಸುಂಟಿಕೊಪ್ಪ, ಜ. ೧೯: ಬಿಹಾರದ ಮುಜಾರ್ಪುರ್ ಪರಸ್ ಮಹಲ್ ಗಾರ್ಡನ್ ಮೈದಾನದಲ್ಲಿ ನಡೆದ ಮೂರನೇ ಫೆಡರೇಶನ್ ಕಪ್ ಚಾಂಪಿಯನ್‌ಶಿಫ್ ಸೆಸ್ಟೋಬಾಲ್ ಟೂರ್ನಿಯಲ್ಲಿ ಕರ್ನಾಟಕದ ಬಾಲಕಿ ಯರ ತಂಡ ಜಯ ಗಳಿಸಿದರೆ, ಬಾಲಕರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಬಿಹಾರದ ಸೆಸ್ಟೋಬಾಲ್ ಫೆಡರೇಶನ್ ವತಿಯಿಂದ ಪರಸ್ ಗಾರ್ಡನ್ ಮೈದಾನದಲ್ಲಿ ಈಚೆಗೆ ನಡೆದ ರೋಮಾಂಚನಕಾರಿ ಫೈನಲ್ ಟೂರ್ನಿಯಲ್ಲಿ ಕರ್ನಾಟಕದ ಬಾಲಕಿಯರ ತಂಡವು ೪೨-೩೦ ಅಂಕಗಳಿAದ ಛತ್ತಿಸ್‌ಘಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಸೋಲಿಸಿ ಅಂತಿಮ ಘಟ್ಟಕ್ಕೆ ಪ್ರವೇಶ ಪಡೆದಿತ್ತು.

ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಬಾಲಕರ ತಂಡವು ಉತ್ತರಪ್ರದೇಶ ತಂಡದ ವಿರುದ್ಧ ೯೨-೭೮ ಅಂಕಗಳಿAದ ಸೋಲನ್ನು ಒಪ್ಪಿಕೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯ ದಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಕೊಡಗಿನ ಕುಶಾಲನಗರದ ತರಬೇತುದಾರರ ಜಾನ್ಸನ್ ಅವರ ನೇತೃತ್ವದಲ್ಲಿ ಕೊಡಗಿನ ಶಾಹಿಲ್ ಉಸ್ಮಾನ್ ಸುಂಟಿಕೊಪ್ಪ, ಇರ್ಷಾದ್, ಸಹಲ್, ಪ್ರೀಮಿತ್, ಸುಪ್ರೀತ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.