ಮಡಿಕೇರಿ, ಜ. ೧೮: ಸದಸ್ಯರೇ ರೋಟರಿ ಸಂಸ್ಥೆಗಳ ಜೀವಾಳವಾಗಿದ್ದು ಹೊಸಪೀಳಿಗೆಯ ಸದಸ್ಯರ ಸೇರ್ಪಡೆ ಮೂಲಕ ರೋಟರಿಯಲ್ಲಿ ಬದಲಾವಣೆಯ ಗಾಳಿ ಬೀಸುವ ಅಗತ್ಯವಿದೆ ಎಂದು ರೋಟರಿ ಜಿಲ್ಲೆ ೩೧೮೧ನ ಗವರ್ನರ್ ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್, ಅಂರ‍್ರಾಷ್ಟಿçÃಯ ರೋಟರಿಯ ೧೧೮ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಾದ ಜೆನಿಫರ್ ಜೋನ್ಸ್ ಅಧ್ಯಕ್ಷೆಯಾಗಿದ್ದು, ಈ ಮೂಲಕ ಮಹಿಳೆಯರಿಗೆ ರೋಟರಿ ಸಂಸ್ಥೆ ಪ್ರಾಮುಖ್ಯತೆಯನ್ನು ನೀಡಿದೆ. ಪ್ರತೀ ರೋಟರಿ ಸಂಸ್ಥೆಯಲ್ಲಿಯೂ ಶೇ. ೩೦ ರಷ್ಟು ಮಹಿಳಾ ಸದಸ್ಯರು ಇರುವಂತೆ ಗಮನ ಹರಿಸಲಾಗುತ್ತಿದೆ. ಮಹಿಳೆಯರ ಆಡಳಿತದಲ್ಲಿ ಅಭಿವೃದ್ಧಿಪರ ಚಿಂತನೆಗಳು ಹೆಚ್ಚುತ್ತದೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಹೀಗಾಗಿ ರೋಟರಿ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯೆಯರೂ ಸಕ್ರಿಯರಾಗಿ ಪಾಲ್ಗೊಳ್ಳುವಂತಾಗಬೇಕೆAದು ಕರೆ ನೀಡಿದರು.
ಸದಸ್ಯರೇ ರೋಟರಿಯ ಜೀವಾಳವಾಗಿರುವ ಹಿನ್ನೆಲೆಯಲ್ಲಿ ರೋಟರಿಯಲ್ಲಿ ಸದಸ್ಯತ್ವ ಹೆಚ್ಚಳಕ್ಕೆ ಪ್ರತೀ ವರ್ಷ ಪ್ರಯತ್ನಿಸಲಾಗುತ್ತಿದೆ. ಸೇವಾ ಮನೋಭಾವ ಮತ್ತು ಜೀವನ ಮೌಲ್ಯಗಳ ಗುಣ ಹೊಂದಿರುವವರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಈ ಮೂಲಕ ರೋಟರಿಯು ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಸಾಮಾಜಿಕ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಿದೆ ಎಂದೂ ಪ್ರಕಾಶ್ ಕಾರಂತ್ ಹೇಳಿದರು.
ಮಿಸ್ಟಿಹಿಲ್ಸ್ ವಾರ್ತಾ ಸಂಚಿಕೆ ಸಂಪಾದಕ ಅನಿಲ್ ಎಚ್.ಟಿ. ಸಂಪಾದಕತ್ವದಲ್ಲಿ ಪ್ರಕಟವಾದ ‘ರೋಟೋ ಮಿಸ್ಟ್’ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ರೋಟರಿ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ತಾ. ೨೪ ರಂದು ಮಡಿಕೇರಿ ರೋಟರಿ ಸಂಸ್ಥೆಯಿAದ ರೈಡ್ ಫಾರ್ ರೋಟರಿ ಅಭಿಯಾನದಡಿ ಮಡಿಕೇರಿಗೆ ಬರುತ್ತಿರುವ ದೇಶವಿದೇಶಗಳ ೨೪ ಬೈಕ್ ಸವಾರರಿಗೆ ಆತಿಥ್ಯ ವಹಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆಯ ಸಂದೇಶದೊAದಿಗೆ ಈ ಬೈಕ್ ಜಾಥಾ ಮಡಿಕೇರಿಗೆ ಬರುತ್ತಿದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ೧೮ ವರ್ಷಗಳ ರೋಟರಿ ಮಿಸ್ಟಿ ಹಿಲ್ಸ್ ನಾನಾ ಕಾರ್ಯಯೋಜನೆಗಳ ಮೂಲಕ ಜನತೆಗೆ ಸ್ಪಂದಿಸಿದೆ ಎಂದು ತಿಳಿಸಿದರು. ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಸಂಸ್ಥೆಯ ವರದಿ ಮಂಡಿಸಿದರು.
ಈ ಸಂದರ್ಭ ರೋಟರಿ ಮಿಸ್ಟಿಹಿಲ್ಸ್ಗೆ ನೂತನ ಸದಸ್ಯರಾಗಿ ಡಾ. ಚೇತನ್, ಕಪಿಲ್ ದುಗ್ಗಳ ಮತ್ತು ಸುಮತಿ ವಿಶ್ವನಾಥ್ ಅವರನ್ನು ಸೇರ್ಪಡೆಗೊಳಿಸಲಾಯಿತು. ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ನೆರವೇರಿಸಿದರು.
ಪುಷ್ಪೋದ್ಯಾನ ನಿರ್ವಹಣೆಗಾಗಿ ಮಡಿಕೇರಿಯ ಸವಿತಾ ಕೆ. ಭಟ್, ವಿಜ್ಞಾನ ವಾಹಿನಿ ಕಾರ್ಯಕ್ರಮಕ್ಕಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮುಖ್ಯಸ್ಥ ಎಸ್. ಪ್ರವೀಣ್ ಕುಮಾರ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ, ಬೈಕ್ ಮಾದರಿಗಳ ತಯಾರಿಕೆಗಾಗಿ ಯುವ ಸಾಧಕ ಎನ್.ಕೆ. ಆಕಾಶ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಹಾಜರಿದ್ದರು.