ಪೊನ್ನಂಪೇಟೆ, ಜ.೧೮ : ಚೆನ್ನಯ್ಯನ ಕೋಟೆ ಸ್ನೇಹಿತರ ಬಳಗದ ವತಿಯಿಂದ ೭೪ ನೇ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿ ಜನವರಿ ೨೯ ಮತ್ತು ೩೦ ರಂದು ಚೆನ್ನಯ್ಯನಕೋಟೆ ಸಮುದಾಯ ಭವನದಲ್ಲಿ ನಡೆಯಲಿದ್ದು, ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. ೨೭ ರೊಳಗೆ ಹೆಸರು ನೊಂದಾಯಿಸಿಕೊಳ್ಳುವAತೆ ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ೮೧೦೫೧೯೪೫೫೨ ಮತ್ತು ೯೬೩೨೬೦೭೬೯೦ ಸಂಪರ್ಕಿಸುವAತೆ ಕೋರಲಾಗಿದೆ.