ಸೋಮವಾರಪೇಟೆ, ಜ. ೧೮: ತಾಲೂಕಿನ ಮಾದಾಪುರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾದಾಪುರದ ಜಂಬೂರು ಗ್ರಾಮದ ದೊಡ್ಡಬಾಣೆ ನಿವಾಸಿ ಇಬ್ರಾಹಿಂ, ಮಠದ ರಸ್ತೆ ನಿವಾಸಿ ಶಹನಾಬ್, ಕಾರೆಕಾಡು ಬ್ಲಾಕ್ನ ವಸಂತ ಅವರುಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದಾಪುರ ಪೊಲೀಸ್ ಉಪಠಾಣೆಯ ಎಎಸ್ಐ ಪೊನ್ನಪ್ಪ, ಮುಖ್ಯಪೇದೆ ಅಬ್ದುಲ್ ರೆಹಮಾನ್, ರವಿಕಾಂತ ಲಮಾಣಿ, ಪರಸಪ್ಪ ಉಕ್ಕಲಿ ಅವರುಗಳನ್ನು ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು ಗಾಂಜಾ ಮತ್ತು ಇತರ ಮಾದಕ ವಸ್ತುಗಳ ಮಾರಾಟಗಾರರ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ನಿಯೋಜಿಸಿದ್ದು, ಈ ತಂಡ ಬೀಟ್ ನಡೆಸುತ್ತಿದ್ದ ಸಂದರ್ಭ ಮೂವರು ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ಗೆ ಮಾಹಿತಿ ನೀಡಿದ ಮೇರೆ ಕಾರ್ಯಾಚರಣೆಗೆ ಇಳಿದ ಪೊಲೀಸರ ತಂಡ ಮಾದಾಪುರ, ಮಠದ ರಸ್ತೆಯಲ್ಲಿರುವ ಹೊಳೆ ಬದಿಯ ಶೆಡ್ನಲ್ಲಿ ಅಕ್ರಮ ವಾಗಿ ಗಾಂಜಾ ಮಾರಾಟ ಮಾಡು ತ್ತಿದ್ದ ಮೂವರನ್ನು ಸೆರೆ ಹಿಡಿದಿದೆ.
ಕಾರ್ಯಾಚರಣೆ ಸಂದರ್ಭ ಆರೋಪಿಗಳು ಮಾರಾಟಕ್ಕಿಟ್ಟಿದ್ದ ೧೮,೦೦೦ ರೂಪಾಯಿ ಮೌಲ್ಯದ ಗಾಂಜಾ ಸೇರಿದಂತೆ ಆರೋಪಿಗಳಿಗೆ ಸೇರಿದ ೩೦ ಸಾವಿರ ಮೌಲ್ಯದ ಎರಡು ಮೊಬೈಲ್ಗಳು, ೧ ಲಕ್ಷ ಮೌಲ್ಯದ ಎರಡು ದ್ವಿಚಕ್ರವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿ ಕೊಂಡಿರುವ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.