ಕೂಡಿಗೆ, ಜ. ೧೯: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಮಕರ ಸಂಕ್ರಾAತಿ ಹಬ್ಬದ ಆಚರಣೆಯು ಸಡಗರ ಸಂಭ್ರಮದಿAದ ಆಚರಿಸಲ್ಪಟ್ಟಿತು. ವ್ಯಾಪ್ತಿಯ ಗ್ರಾಮಗಳಲ್ಲಿರುವ ಗ್ರಾಮ ದೇವರುಗಳಿಗೆ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯಾ ದೇವಾಲಯ ಸಮಿತಿಯವರು ಹೋಮ-ಹವನ ಗಳನ್ನು ನಡೆಸಿ ವಿಶೇಷ ಪೂಜಾ ಕೈಂಕರ್ಯ ಗಳೊಂದಿಗೆ ನಡೆಸಿದರು. ಇದೇ ಸಂದರ್ಭದಲ್ಲಿ ಗ್ರಾಮಗಳಲ್ಲಿ ರೈತರು ಸಾಕಿದ ಹಸುಗಳಿಗೆ ಸ್ನಾನ ಮಾಡಿಸಿ ಗೋ ಪೂಜೆಯನ್ನು ಸಂಪ್ರದಾಯದAತೆ ನಡೆಸಲಾಯಿತು. ಹೆಣ್ಣು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ, ಸಂಪ್ರದಾಯದAತೆ ಅರಿಸಿಣ, ಕುಂಕುಮ, ಸೇರಿದಂತೆ ಎಳ್ಳು ಬೆಲ್ಲದ ಮಿಶ್ರಿತ ಸಿಹಿಯನ್ನು ಹಿಡಿದು ಮನೆ-ಮನೆಗೆ ತೆರಳಿ ಹಂಚಿ ಶುಭಾಶಯ ಗಳನ್ನು ಹಂಚಿಕೊAಡರು. ಹಬ್ಬದ ಅಂಗವಾಗಿ ತಳಿರು ತೋರಣಗಳಿಂದ, ಮತ್ತು ವಿದ್ಯುತ್ ದೀಪಗಳಿಂದ ಗ್ರಾಮವನ್ನು ಸಿಂಗಾರಗೊಳಿಸಲಾಗಿತ್ತು
ಅರ್ವತೋಕ್ಲು : ಮಕರ ಸಂಕ್ರಾAತಿ ಪ್ರಯುಕ್ತ ಗೋಣಿಕೊಪ್ಪಲು ಬಳಿಯ ಅರ್ವತೋಕ್ಲು ಮೈಸೂರಮ್ಮ ನಗರದ ಕಲರವ ಚಿನ್ನರ ಸಂಘದ ಮಕ್ಕಳು ಊರಿನ ಭಕ್ತರು ಸೇರಿ ಭಜನೆ ಮಾಡಿದರು. ಕಾರ್ಯಕ್ರಮವನ್ನು ಮುತ್ತಪ್ಪ ದೇವಸ್ಥಾನದಲ್ಲಿ ನಡೆಸಲಾಯಿತು.
ಸುಮಾರು ೭೦ ಭಕ್ತರು ಸೇರಿ ಭಜನೆ ಮಾಡಿದರು. ಸ್ಥಳೀಯರಾದ ಮುರ್ಗೇಶ್, ರೇಣುಕುಮಾರ್, ರಶ್ಮಿ ದೇವಯ್ಯ ಭಜನೆ ಹಾಡುಗಳನ್ನು ಹೇಳಿದರು. ಮುತ್ತಪ್ಪ ದೇವಸ್ಥಾನದ ಪೂಜಾರಿ ಚಂದ್ರ ಅವರ ಮುಂದಾಳತ್ವ ದಲ್ಲಿ ಕಾರ್ಯಕ್ರಮ ನಡೆಯಿತು. ಭಜನೆ ಕಾರ್ಯಕ್ರಮದ ನಂತರ ಮುತ್ತಪ್ಪ ಮತ್ತು ಅಯ್ಯಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು