ಶ್ರೀಮಂಗಲ, ಜ. ೧೮: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿAದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದ್ದು, ಏಪ್ರಿಲ್ ೧ ರಿಂದ ೯ ರವರೆಗೆ ಪಂದ್ಯಾವಳಿ ನಡೆಸಲು ನಿರ್ಧರಿಸ ಲಾಗಿದೆ ಎಂದು ಬಾಚೀರ ಕುಟುಂಬ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖರು ತಿಳಿಸಿದ್ದಾರೆ.
ಈ ಬಗ್ಗೆ ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷ ಬಾಚೀರ ಎನ್. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕುಟುಂಬ ಅಧ್ಯಕ್ಷ ಸುಜಾ ಉತ್ತಯ್ಯ ಮತ್ತು ಪಂದ್ಯಾವಳಿ ಅಧ್ಯಕ್ಷ ಕಾರ್ಯಪ್ಪ ಈ ಕುರಿತು ವಿವರಣೆ ನೀಡಿದರು. ಪಂದ್ಯಾವಳಿಗೆ ಮೊದಲು ನೋಂದಾಯಿಸುವ ೬೪ ತಂಡಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿದ್ದು, ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ರೂ. ೫೦ ಸಾವಿರ ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೩೦ ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ ರೂ. ೨೦ ಸಾವಿರ ಮತ್ತು ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲಾ ಪಂದ್ಯಾವಳಿಗೆ ಮ್ಯಾನ್ ಆಫ್ ದಿ ಮ್ಯಾಚ್, ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಫೀಲ್ಡರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯನ್ನು ನೀಡಲಾಗುವುದು. ಜಿಲ್ಲೆಯ ಹೊರಗೆ ಹಾಗೂ ವಿವಿಧ ಕಡೆಯಲ್ಲಿ ನೆಲೆಸಿರುವ ವಿವಿಧ ಕೊಡವ ಕುಟುಂಬದವರು ಕ್ರಿಕೆಟ್ ಪಂದ್ಯಾವಳಿಯ ಕಾರಣದಿಂದ ಒಂದೆಡೆ ಸೇರಿಸಲು ಸಹಕಾರಿ ಯಾಗಲಿದೆ ಎಂದು ಹೇಳಿದರು. ಏಪ್ರಿಲ್ ಒಂದರAದು ಉದ್ಘಾಟನಾ ಪಂದ್ಯ ಮಹಿಳಾ ತಂಡಗಳ ನಡುವೆ ಆಯೋಜಿಸಲಾಗಿದೆ. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘ ಹಾಗೂ ಹರಿಹರ ಮಹಿಳಾ ಇಲೆವೆನ್ ನಡುವೆ ನಡೆಯಲಿದೆ ಎಂದು ತಿಳಿಸಿದರು.
ಪಂದ್ಯಾವಳಿಯ ತಾಂತ್ರಿಕ ಹಾಗೂ ತೀರ್ಪುಗಾರಿಕೆ ನಿರ್ವಹಣೆಯನ್ನು ಹರಿಹರದ ಫ್ರೆಂಡ್ಸ್ ಇಲೆವೆನ್ ನಿರ್ವಹಿಸಲಿದೆ ಎಂದು ತಿಳಿಸಿದವರು ಹೆಚ್ಚಿನ ವಿವರಕ್ಕೆ ಮೊ. ೯೯೭೨೩೫೫೨೨೨, ಮೊ.೯೮೮೦೧೬೧೮೮೭ ಸಂಪರ್ಕಿಸಬಹುದಾಗಿದೆ ಎಂದರು. ಈ ಸಂದರ್ಭ ಕ್ರೀಡಾಕೂಟ ಕಾರ್ಯನಿರ್ವಹಣಾಧಿಕಾರಿ ರಾಜ ಉತ್ತಪ್ಪ, ಕಾರ್ಯದರ್ಶಿ ವಾಸು ದೇವಯ್ಯ, ಕುಟುಂಬದ ಸುರಕ್ಷಾ, ಸಂಪತ್, ಅಶ್ವಿನಿ ಸಂಪತ್, ನಿರನ್ ನಾಣಯ್ಯ, ಜಸ್ಮಿ, ಸ್ವಾಗತ್, ಅಮನ್ ಸುಬ್ಬಯ್ಯ ಹಾಜರಿದ್ದರು.