ಮುಳ್ಳೂರು, ಜ. ೧೭: ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಹುಲುಕೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಬೆಂಬಳೂರು ಬಾಣತಮ್ಮಳ ೭ ಮಂದಿ ಪುತ್ರರಲ್ಲಿ ಒಬ್ಬನಾದ ಕುಮಾರಲಿಂಗೇಶ್ವರನು ಹುಲುಕೋಡು ಗ್ರಾಮದಲ್ಲಿ ನೆಲಸಿದ್ದಾನೆಂದು ಪ್ರತೀತಿಯಲ್ಲಿರುವ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಂಕ್ರಾAತಿ ಹಬ್ಬ ಕಳೆದು ೨ ದಿನದ ಮುಳ್ಳೂರು, ಜ. ೧೭: ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಹುಲುಕೋಡು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಬೆಂಬಳೂರು ಬಾಣತಮ್ಮಳ ೭ ಮಂದಿ ಪುತ್ರರಲ್ಲಿ ಒಬ್ಬನಾದ ಕುಮಾರಲಿಂಗೇಶ್ವರನು ಹುಲುಕೋಡು ಗ್ರಾಮದಲ್ಲಿ ನೆಲಸಿದ್ದಾನೆಂದು ಪ್ರತೀತಿಯಲ್ಲಿರುವ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಂಕ್ರಾAತಿ ಹಬ್ಬ ಕಳೆದು ೨ ದಿನದ ಕುಮಾರಲಿಂಗೇಶ್ವರ ದೇವರ ವಿಗ್ರಹವನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯ ಬೀದಿಯಿಂದ ಕುಮಾರಲಿಂಗೇಶ್ವರ ಜಾತ್ರಾ ಬನದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ನಂತರ ಜಾತ್ರಾ ಬನದಲ್ಲಿರುವ ದೇವಸ್ಥಾನದ ಸುತ್ತ ಅಡ್ಡಪಲ್ಲಕ್ಕಿ ಪ್ರದರ್ಶನ ನಡೆಸಿ ದೇವಸ್ಥಾನದಲ್ಲಿ ದೇವರ ವಿಗ್ರಹವನ್ನು ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಯಿತು.

ಭಕ್ತಾದಿಗಳು ಈಡುಗಾಯಿ ಒಡೆದು ದೇವರಿಗೆ ಹರಕೆ ಸಲ್ಲಿಸಿದರು. ವಿವಿಧ ಮಠಾಧೀಶರು ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಭಾಗವಹಿಸಿದ್ದರು. ಕುಮಾರಲಿಂಗೇಶ್ವರ ಜಾತ್ರಾ ಬನದಲ್ಲಿ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ರವರೆಗೆ ಜಾತ್ರೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎಂ.ವಿವೇಕ್ ಪದಾಧಿಕಾರಿಗಳು, ಸಮಿತಿ ಸದಸ್ಯರು, ಗ್ರಾಮದ ಪ್ರಮುಖರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಕೊನೆಗೊಂಡಿತು.