ಸೋಮವಾರಪೇಟೆ, ಜ.೧೭: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಶನಿವಾರಸಂತೆಯ ನಿವೃತ್ತ ಉಪನ್ಯಾಸಕಿ, ಪತ್ರಕರ್ತೆ, ಕವಯತ್ರಿ ಶ.ಗ. ನಯನತಾರಾ ಅವರನ್ನು ಆಯ್ಕೆ ಮಾಡಲಾಗಿದೆ.
ಪಟ್ಟಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಪಿ. ಕೇಶವ ಕಾಮತ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಫೆಬ್ರವರಿ ೧೧ ರಂದು ತಾಲೂಕು ೮ ನೇ ಸಾಹಿತ್ಯ ಸಮ್ಮೇಳನವು ಗೌಡಳ್ಳಿಯಲ್ಲಿ ಆಯೋಜಿಸಲಾಗಿದ್ದು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶನಿವಾರಸಂತೆಯ ಶ.ಗ. ನಯನತಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ
ಸೋಮವಾರಪೇಟೆ : ಸಮ್ಮೇಳನಾಧ್ಯಕ್ಷೆಯಾಗಿ ನಯನತಾರಾ
(ಮೊದಲ ಪುಟದಿಂದ) ಪರಿಷತ್ತಿನ ಅಧ್ಯಕ್ಷ ಎಸ್. ಡಿ. ವಿಜೇತ್ ಘೋಷಿಸಿದರು.
ಕವಿಗೋಷ್ಠಿಗೆ ಆಹ್ವಾನ: ೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯಲಿರುವ ಕವಿಗೋಷ್ಠಿ ಗೆ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕವಿಗಳಿಂದ ಮಾತ್ರ ಕವನಗಳನ್ನು ಆಹ್ವಾನಿಸಲಾಗಿದ್ದು, ಕವಿಗೋಷ್ಠಿಯಲ್ಲಿ ಯುವ, ಉದಯೋನ್ಮುಖ ಹಾಗೂ ಹೊಸ ಪ್ರತಿಭೆ ಮತ್ತು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕವಿಗೋಷ್ಠಿಯ ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ. ಸ್ವ ರಚಿತ ಕವಿತೆಗಳು ೧೫ ರಿಂದ ೨೦ ಸಾಲುಗಳ ಮಿತಿಯಲ್ಲಿದ್ದು, ಕವನ ವಾಚನಕ್ಕೆ ೩ ನಿಮಿಷಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವ ರಚಿತ ಕವನದ ಮೂಲ ಪ್ರತಿಯನ್ನು ಜನವರಿ ೨೩ ರ ಒಳಗಾಗಿ ಜಲಕಾಳಪ್ಪ, ಮೊ: ೮೨೭೭೧೩೧೪೫೭, ವಸಂತಿ ರವೀಂದ್ರ , ಮೊ: ೮೯೭೦೦೭೫೫೯೪ ಇವರುಗಳನ್ನು ಸಂಪರ್ಕಿಸಿ, ಸಲ್ಲಿಸಬೇಕು. ತಾ.೨೩ ರ ನಂತರ ಬರುವ ಕವನಗಳನ್ನು ಕವಿಗೋಷ್ಠಿಗೆ ಪರಿಗಣಿಸಲಾಗವುದಿಲ್ಲ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ತಿಳಿಸಿದ್ದಾರೆ.