ಮಡಿಕೇರಿ, ಜ. ೧೭: ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಈ ಬಾರಿಯ (೨೦೨೧-೨೦೨೨) ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದಿದ್ದಾರೆ. ಇವರು ಆಂಗ್ಲ ಭಾಷೆಯಲ್ಲಿ ಖಿhe ಅuಟಣuಡಿe ಚಿಟಿಜ Iಡಿಚಿಜeಣioಟಿ oಜಿ ಏoಜvಚಿs (Wiಣh Sಠಿeಛಿiಚಿಟ ಡಿeಜಿeಡಿeಟಿಛಿe ಣo iಣs oಡಿiಠಿiಟಿ ಚಿಟಿಜ eಚಿoಟieಣioಟಿ) ಕೊಡವರ ಸಂಸ್ಕೃತಿ ಮತ್ತು ಪರಂಪರೆ, ಕೊಡವರ ಹುಟ್ಟು ಮತ್ತು ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿ ಬರೆದ ಪುಸ್ತಕಕ್ಕೆ ಫೆಲೋಶಿಪ್ ದೊರೆತಿದೆ.
ಈ ಪುಸ್ತಕದಲ್ಲಿ ಕೊಡವರ ಚರಿತ್ರೆ, ಹಿಂದೆ ನಾಯಕರ ಆಳ್ವಿಕೆಯಲ್ಲಿದ್ದ ಕೊಡವರು, ಕೊಡವರು ಯಾವ ರೀತಿಯಲ್ಲಿ ವಿಭಿನ್ನ ಪರಂಪರೆಯನ್ನು ಹೊಂದಿದ್ದಾರೆ ಎಂಬ ವಿಚಾರದ ಅನೇಕ ಪುಸ್ತಕಗಳನ್ನು ಓದಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ.
ಕೊಡವ ಸಮುದಾಯದ ಶಿಸ್ತು, ಗುರು-ಕಾರುಣನ ಆರಾಧನೆ, ಹಬ್ಬ ಹರಿದಿನಗಳು, `ಐನ್ಮನೆ' ಇದೆಲ್ಲವೂ ನಮಗೆ ತಲೆಮಾರುಗಳಿಂದ ಬಂದಿದ್ದು, ಅವುಗಳನ್ನು ಸಂರಕ್ಷಿಸುವುದು ಮುಖ್ಯ. ಇದರಿಂದ ಕೊಡಗು ಮತ್ತು ಕೊಡವರ ಭವಿಷ್ಯಕ್ಕೆ ಉಪಯೋಗವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದರೂ, ನಾವು ಸಾಧ್ಯವಾದಷ್ಟು ನಿಯಮಗಳಿಗೆ ಬದ್ಧರಾಗಿ ಕೊಡವರ ಅನನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದು ಶೋಭಾ ಸುಬ್ಬಯ್ಯ ಹೇಳುತ್ತಾರೆ.