ವೀರಾಜಪೇಟೆ, ಜ. ೧೭: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ಅಯ್ಯಪ್ಪ ಮಹೋತ್ಸವವು ಸಡಗರ ಸಂಭ್ರಮ, ಶ್ರದ್ಧಾ ಭಕ್ತಿಯಿಂದ ಜರುಗಿತು.
ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಕ್ರಮವು ನಡೆದು ದೇವತಾ ಪ್ರಾರ್ಥನೆ, ಹಾಗೂ ನೂತನ ಪಾಕ ಶಾಲೆಯಲ್ಲಿ ಗಣಪತಿ ಹವನ ನಡೆಯಿತು. ತದನಂತರ ಧರ್ಮಶಾಸ್ತನಿಗೆ ಪಂಚಾಮೃತ ಅಭಿಷೇಕ ನಡೆದು, ಬೇಟೋಳಿ ಮಹಿಳಾ ಮಂಡಳಿಯವರಿAದ ಭಜನೆ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನ ಸಂತರ್ಪಣ ಸೇವೆ ನಡೆಯಿತು. ಸಂಜೆ ಅಯ್ಯಪ್ಪ ಭಕ್ತಾದಿಗಳಿಂದ ಭಜನೆ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ವಿಶೇಷ ಪೂಜೆಯಾದ ಮಕರ ಜ್ಯೋತಿ ಪೂಜೆ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮದ ನಂತರ ದೇವಾಲಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ವಸಂತ ನಾಯಕ್ ಆಗಮಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ವಸಂತ ನಾಯಕ್ ಇಂತಹ ಕಾರ್ಯಕ್ರಮಗಳ ಅಗತ್ಯ ಪ್ರಸ್ತುತದಲ್ಲಿ ಅಗತ್ಯವಿದೆ. ಸಮಾಜದ ಸಾಮರಸ್ಯಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಮುಂದಿನ ಪೀಳಿಗೆಗೆ ಇದು ದಾರಿಯಾಗಬೇಕು. ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮಂಡಳಿಯವರ ಕಾರ್ಯವನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಡಾ. ರಾಮಕೃಷ್ಣ ಬೋರ್ಕರ್, ಉಪಾಧ್ಯಕ್ಷ ನಂದ ಬಿ.ಜಿ, ಕಾರ್ಯದರ್ಶಿ ಸುಮನ ಉಪಸ್ಥಿತರಿದ್ದರು. ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆಂಗಳೂರಿನ ಪ್ರಖ್ಯಾತ ಕಲಾವಿದ ಪ್ರಹ್ಲಾದ ಆಚಾರ್ಯ ನಡೆಸಿಕೊಟ್ಟ ಮಾತನಾಡುವ ಗೊಂಬೆ ಹಾಗೂ ನೆರಳಿನಾಟ ಪ್ರೇಕ್ಷಕರ ಗಮನ ಸೆಳೆಯಿತು.
ಪುತ್ತೂರು ಸಾರಸ್ವತ ಸಂಘದ ಪದಾಧಿಕಾರಿಗಳಾದ ರಮೇಶ್ ಪ್ರಭು, ಹರೀಶ್ ಬೋರ್ಕರ್ ಮತ್ತು ಸುನಿಲ್ ಬೋರ್ಕರ್, ಹೇಮಲತಾ ಬೋರ್ಕರ್, ಹಾಗೂ ಚಂದ್ರಶೇಖರ್ ಭಟ್ ಹಾಜರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಿತು. ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.