ಜಿಲ್ಲೆಯ ಹಿರಿಯ ಸಾಹಿತಿ ಪೂ.ರಾ. ಶ್ರೀನಿವಾಸ್ (೭೩) ಅವರು ತಾ. ೧೭ ರಂದು ನಿಧನರಾದರು. ಸಮೀಪದ ಕಗ್ಗೋಡ್ಲು ಗ್ರಾಮದಲ್ಲಿ ವಾಸವಾಗಿದ್ದ ಶ್ರೀನಿವಾಸ್ ಹಲವು ಪತ್ರಿಕೆಗಳಲ್ಲಿ ಕಥೆಗಳನ್ನು ಬರೆದಿದ್ದರು. ಹುತ್ತರಿ ಮತ್ತು ಇತರ ಕಥೆಗಳು ಇವರ ಪ್ರಮುಖ ಕಥಾ ಸಂಕಲನವಾಗಿದೆ. ವಿಭಿನ್ನ ಶೈಲಿಯ ಕಥೆಗಳಿಗೆ ಹೆಸರಾಗಿದ್ದ ಶ್ರಿನಿವಾಸ್ ಪೂರಾಶ್ರೀ ಕಾವ್ಯನಾಮದಿಂದ ಕಥೆಗಳನ್ನು ರಚಿಸಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೮ ರಂದು (ಇಂದು) ಕಗ್ಗೋಡ್ಲು ಗ್ರಾಮದ ಸ್ವಗ್ರಾಮದಲ್ಲಿ ನಡೆಯಲಿದೆ.

ಸಂತಾಪ: ಶ್ರೀನಿವಾಸ್ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಸಂತಾಪ ಸೂಚಿಸಿದ್ದಾರೆ. ತಾ. ೧೮ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ಮಡಿಕೇರಿಯ ಕಸಾಪ ಕಚೇರಿಯಲ್ಲಿ ಸಂತಾಪ ಸಭೆ ನಡೆಯಲಿದೆ.