ಕೂಡಿಗೆ, ಜ. ೧೭: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೊಪ್ಪಲು ಗ್ರಾಮದ ಮೋಹನ ಎಂಬ ರೈತನಿಗೆ ಸೇರಿದ ಹೈಬ್ರೀಡ್ ತಳಿಯ ರೂ. ೮೦ ಸಾವಿರಕ್ಕೂ ಅಧಿಕ ಬೆಲೆಬಾಳುವ ಹಸು ಗರ್ಭ ಧರಿಸಿ ೯ ತಿಂಗಳು ಕಳೆದು ಕರು ಹಾಕುವ ಕೆಲ ಗಂಟೆಗಳ ಮುನ್ನ ಹಸುವಿನ ಹೊಟ್ಟೆಯಲ್ಲಿ ಕರು ಮೃತ ಪಟ್ಟಿದ್ದುದರಿಂದಾಗಿ ಹಸು ಕೂಡ ಸಾವನ್ನಪ್ಪಿದೆ.

ಮೂಡಲಕೊಪ್ಪಲು ಗ್ರಾಮದ ಮೋಹನ್ ಹೈನುಗಾರಿಕೆಯಲ್ಲಿ ತೊಡಗಿಸಿಗೊಂಡಿದ್ದು, ಹೊರ ರಾಜ್ಯದ ಹೈಬ್ರೀಡ್ ತಳಿಯ ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಿ ಸಾಕುತ್ತಿದ್ದರು. ಈ ಹಸು ನಾಲ್ಕನೇ ಬಾರಿಗೆ ಗರ್ಭಧಾರಣೆಯಾಗಿ ಕರು ಹಾಕುವ ಮುನ್ನ ಕರು ಸತ್ತ ಹಿನ್ನೆಲೆ ತಕ್ಷಣವೇ ಪಶುವೈದ್ಯರನ್ನು ಭೇಟಿಯಾಗಿ ಹಸುವನ್ನು ಶಸ್ತçಚಿಕಿತ್ಸೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಅದಕ್ಕೂ ಮುನ್ನ ಹಸು ಸಾವನ್ನಪ್ಪಿದೆ. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಭಾರೀ ನಷ್ಟ ಉಂಟಾಗಿದೆ. ಸಾವನ್ನಪ್ಪಿದ ಹಸುವನ್ನು ಶಸ್ತçಚಿಕಿತ್ಸೆ ಮಾಡಿ ಸತ್ತ ಕರುವನ್ನು ಹೊರ ತಗೆಯಲಾಯಿತು.

ಮೋಹನನ ಮನೆಯವರು ಗ್ರಾಮೀಣ ಸಂಪ್ರದಾಯದAತೆ ಸತ್ತ ಹಸು ಮತ್ತು ಕರುವಿಗೆ ಸಿಂಗಾರ ಮಾಡಿ ಪೂಜೆ ಸಲ್ಲಿಸಿ ತಮ್ಮ ಜಮೀನಿನಲ್ಲಿ ಯಂತ್ರದ ಮೂಲಕ ಗುಂಡಿ ತೆಗೆಸಿ ಅಂತ್ಯಕ್ರಿಯೆ ನೆರವೇರಿಸಿದರು.