ವೀರಾಜಪೇಟೆ, ಜ. ೧೮: ವಿ.ವೈ.ಸಿ. ಫುಟ್ಬಾಲ್ ಕ್ಲಬ್ ಕೋಟೆಕೊಪ್ಪ ವೀರಾಜಪೇಟೆ ಇವರ ವತಿಯಿಂದ ಮೂರನೇ ವರ್ಷದ ರಾಷ್ಟçಮಟ್ಟದ ಹೊನಲು ಬೆಳಕಿನ ೫+೨ ಫುಟ್ಬಾಲ್ ಪಂದ್ಯಾಟವನ್ನು ಫೆ. ೩ ರಿಂದ ೫ ರವರೆಗೆ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಗೋಪಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪಂದ್ಯಾವಳಿ ನಡೆಸಿಕೊಂಡು ಬರಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ೪೦ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾಟದ ವಿಜೇತರು ಹಾಗೂ ಪರಾಜಿತರಿಗೆ ನಗದು ಹಾಗೂ ಟ್ರೋಫಿ ನೀಡಲಾಗುವುದು. ಆಸಕ್ತ ತಂಡಗಳು ತಾ. ೨೫ ರೊಳಗೆ ರಂಜಿತ್ ೮೮೬೧೩೧೬೨೪೯, ಶಿವ ೮೧೦೫೪೨೪೭೮೦ ಇವರುಗಳಲ್ಲಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.