ವೀರಾಜಪೇಟೆ, ಜ. ೧೮: ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ತಾ. ೨೧ ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೯ನೇ ಸಾಹಿತ್ಯ ಸಮ್ಮೇಳನದ ಸಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ವೈದ್ಯರು, ಖ್ಯಾತ ಪಕ್ಷಿ ತಜ್ಞರು ಸಾಹಿತಿಗಳಾದ ವೀರಾಜಪೇಟೆಯ ಡಾ. ಎಸ್.ವಿ. ನರಸಿಂಹನ್ ಅವರಿಗೆ ಕಸಾಪದಿಂದ ಅಧಿಕೃತ ಆಹ್ವಾನ ನೀಡಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ ನೇತೃತ್ವದಲ್ಲಿ ಡಾ. ಎಸ್. ವಿ. ನರಸಿಂಹನ್ ಅವರ ನಿವಾಸದಲ್ಲಿ ಆಹ್ವಾನ ನೀಡಲಾಯಿತು.
ಈ ಸಂದರ್ಭ ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಟೋಮಿ ಥೋಮಸ್, ಸಮಿತಿ ಸದಸ್ಯರಾದ ರಜಿತಾ ಕಾರ್ಯಪ್ಪ, ಉಷಾ ಪ್ರೀತಮ್ ಹಾಜರಿದ್ದರು.