ಮಡಿಕೇರಿ, ಜ. ೧೮: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ನಿವಾಸಿ ಬಿ.ಬಿ. ಕುಂಞಪ್ಪ (೬೦) ಎಂಬವರು ತಾ. ೯ರಂದು ಮನೆಯಿಂದ ಹೊರ ಹೋದವರು ಹಿಂತಿರುಗಿ ಬಂದಿರುವುದಿಲ್ಲ ಎಂದು ಕುಂಞಪ್ಪ ಅವರ ಪುತ್ರ ಬಿ.ಬಿ. ದಿನೇಶ್ ನೀಡಿರುವ ಪುಕಾರಿನ ಮೇರೆಗೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ನಾಪತ್ತೆಯಾಗಿರುವ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಠಾಣೆ ೦೮೨೭೪-೨೫೭೩೩೩, ೨೫೬೪೬೨ ಈ ಸಂಖ್ಯೆಗೆ ಅಥವಾ ಸನಿಹದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.