ಮಡಿಕೇರಿ, ಜ. ೧೮: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಆವಂಡಿ, ಪೊದಕಾನ, ಮೇಘತ್ತಾಳು ವಾರ್ಡ್ಗಳ ಸಭೆ ತಾ. ೧೯ರಂದು ನಡೆಯಲಿದೆ.

ಮುಕ್ಕೋಡ್ಲು, ಆವಂಡಿ, ಪೊದಕಾನ, ಮೇಘತ್ತಾಳು ವಾರ್ಡ್ಸಭೆ ತಾ. ೧೯ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಮುಕ್ಕೋಡ್ಲು ಸೇತುವೆ ಸನಿಹದ ಅಂಗನವಾಡಿಯಲ್ಲಿ, ಹೆಮ್ಮೆತ್ತಾಳು, ಮಕ್ಕಂದೂರು ವಾರ್ಡ್ ಸಭೆ ಮಧ್ಯಾಹ್ನ ೨.೩೦ಕ್ಕೆ ಮಕ್ಕಂದೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.

ತಾ. ೨೪ರಂದು ಬೆಳಿಗ್ಗೆ ೧೧ ಗಂಟೆಗೆ ಮಕ್ಕಂದೂರು, ಮುಕ್ಕೋಡ್ಲು ಗ್ರಾಮಗಳ ಗ್ರಾಮಸಭೆ ಮಕ್ಕಂದೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ, ಗ್ರಾ.ಪಂ. ಅಧ್ಯಕ್ಷ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.