ಚೆಟ್ಟಳ್ಳಿ, ಜ. ೧೭: ಚೆಟ್ಟಳ್ಳಿ ಪ್ರೌಢಶಾಲಾ ಸಮೀಪದ ಗಣಪತಿ ದೇವಾಲಯದಲ್ಲಿ ಕಳವು ಪ್ರಕರಣ ನಡೆದಿದೆ. ಪೂರ್ವಾಹ್ನ ೧೧ ಗಂಟೆಗೆ ದೇವಾಲಯ ಸಮಿತಿ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರು ಪತ್ನಿಯೊಂದಿಗೆ ಪೂಜೆ ಸಲ್ಲಿಸಲು ಚೆಟ್ಟಳ್ಳಿಯ ಗಣಪತಿ ದೇವಾಲಯಕ್ಕೆ ಆಗಮಿಸಿದಾಗ ದೇವಾಲಯದ ಬಾಗಿಲ ಬೀಗ ಒಡೆದಿರುವುದು ಗೋಚರಿಸಿದೆ. ತಕ್ಷಣ ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಪರಿಶೀಲಿಸಿದಾಗ ದೇವಾಲಯದ ಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಹುಂಡಿಯ ಬೀಗವನ್ನು ಮುರಿದು ಸುಮಾರು ೫೦೦೦ ಮೇಲ್ಪಟ್ಟು ನಗದನ್ನು ಕಳವು ಮಾಡಿದ್ದಾರೆ.