ಭಾಗಮಂಡಲ, ಜ. ೧೭: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹತ್ತನೇ ವರ್ಷದ ಚಂಡಿಕಾ ಹೋಮ ಭಾಗಮಂಡಲದ ಕಾವೇರಿ ಕ್ಷೇತ್ರದಲ್ಲಿ ನೆರವೇರಿತು. ಅರ್ಚಕ ಸುಬ್ರಹ್ಮಣ್ಯ ಬೆಳ್ಳೂಕರಾಯ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಶತರುದ್ರ ಪಠಣ, ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಜಿಲ್ಲೆಯ ಕೊಡವ ಮತ್ತು ಅಮ್ಮ ಕೊಡವ ಜನಾಂಗದವರು ಒಂದಾಗಿ ಸೇರಿ ಟ್ರಸ್ಟಿನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿದ್ದರು. ಪುರಾಣಗಳಲ್ಲಿ ಪ್ರಸ್ತಾಪಿಸಿರುವಂತೆ ಅಗಸ್ತö್ಯಮುನಿ ಮತ್ತು ಕಾವೇರಿಯ ನಡುವೆ ಕಲಹಏರ್ಪಟ್ಟಾಗ ಕಾವೇರಿಯ ಪರ ನಿಂತ ಕೊಡವರಿಗೆ ಮತ್ತು ಅಮ್ಮ ಕೊಡವರಿಗೆ ಅಗಸ್ತö್ಯಮುನಿ ಶಾಪ ನೀಡಿದ್ದು ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಪರಿಹಾರ ಕ್ರಮಗಳಂತೆ ಕಾವೇರಿ ಕ್ಷೇತ್ರದಲ್ಲಿ ಚಂಡಿಕಾ ಹೋಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ದೇವಯ್ಯ ,ಟ್ರಸ್ಟಿನ ಉಪಾಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಪ್ರಮುಖರಾದ ಸುಜಾ ಕುಶಾಲಪ್ಪ, ಬಾನಂಡ ಪ್ರತ್ಯು ,ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಕಾಂತಿಬೆಳ್ಳಿಯಪ್ಪ , ಮನು ಮುತ್ತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.