*ಗೋಣಿಕೊಪ್ಪ, ಜ. ೧೭: ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರಾ ಆಯೋಜಿಸಲಾಗಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷೆ ಜೆ. ಶುಭಾಷಿಣಿ ಕುಮಾರ್ ತಿಳಿಸಿದ್ದಾರೆ.

ತಾ. ೨೨ರಂದು ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ ೬.೩೦ ರಿಂದ ಕಣ್ಣಿನ ವಿವಿಧ ತಪಾಸಣಾಗಳು ನಡೆಯಲಿವೆ.

ಮಡಿಕೇರಿಯ ಕಣ್ಣಿನ ತಜ್ಞ ಚೆರಿಯಮನೆ ಡಾ. ಪ್ರಶಾಂತ್ ಕಣ್ಣಿನ ತಪಾಸಣೆ ಮಾಡಲಿದ್ದಾರೆ.

ಅಂದು ಸಮಗ್ರ ಕಣ್ಣಿನ ಪರೀಕ್ಷೆ, ಕಣ್ಣಿನ ಪೊರೆ ಶಸ್ತçಚಿಕಿತ್ಸೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.