ಭಾಗಮಂಡಲ, ಜ. ೧೮: ಬೆಳಗಾವಿಯಲ್ಲಿ ಇತ್ತಿಚೆಗೆ ನಡೆದ ರಾಜ್ಯಮಟ್ಟದ ವಸತಿ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಾಪೋಕ್ಲುವಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ (ಭಾಗಮಂಡಲ)ಯ ೯ನೇ ತರಗತಿಯ ವಿದ್ಯಾರ್ಥಿನಿ ಎಂ.ಎ ಜೈತನ್ಯ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾಳೆ.
ಈಕೆ ೧೦೦ ಮೀಟರ್ ಒಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಈ ಹಿಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ನಡೆದ ಅಥ್ಲೆಟಿಕ್ಸ್ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಳು .ಇವಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಬಿ.ಬಿ ಶಾಲಿನಿ ತರಬೇತಿ ನೀಡಿದ್ದರು.