*ಗೋಣಿಕೊಪ್ಪ, ಜ. ೧೬: ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರ ಆಯೋಜಿಸಿದ ಸೂರ್ಯ ನಮಸ್ಕಾರ ಚಾಲೆಂಜ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ತಿಪ್ಪೇಸ್ವಾಮಿ, ದ್ವಿತೀಯ. ತಮ್ಮಯ್ಯ ಕುಶಾಲನಗರ, ತೃತೀಯ ಮೂಡಗದ್ದೆ ಸುಮನ್, ಸಮಾಧಾನಕರ ಬಹುಮಾನವನ್ನು ರೋಷನ್ ಲೋಪಮುದ್ರ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸಮಿತಾ ಗೋಣಿಕೊಪ್ಪ, ದ್ವಿತೀಯ ಲಲಿತ ವಿರಾಜಪೇಟೆ, ತೃತೀಯ ಪುಷ್ಪ ಗೋಣಿಕೊಪ್ಪ, ಸಮಾಧಾನಕರ ಬಹುಮಾನವನ್ನು ರಜಿತಾ ಕಾರ್ಯಪ್ಪ ಪಡೆದುಕೊಂಡರು.

ಮಕ್ಕಳ ವಿಭಾಗದಲ್ಲಿ ಪ್ರಥಮ ರೋಹಿತ್ ಸೋಮವಾರಪೇಟೆ, ದ್ವಿತೀಯ ಪ್ರಣಮ್, ತೃತೀಯ ಶರಣು ಮತ್ತು ಸಮಾಧಾನಕರ ಬಹುಮಾ£ Àವನ್ನು ಲವೀನಾ ಪಡೆದುಕೊಂಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ಪರವಾಗಿ ಅಂತರಾಷ್ಟಿçÃಯ ಯೋಗಪಟು ಅಮೃತ ರಾಕೇಶ್, ಸುಭಾಷಿಣಿ ರೆಡ್ಡಿ, ಪೊಕ್ಕಳಚಂಡ ಬಿ. ಪೂಣಚ್ಚ, ನರಸಿಂಹ, ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥ ನಾಗರಾಜ್ ಕರಿಕೆ ಇವರುಗಳನ್ನು ಸನ್ಮಾನಿಸಿದರು.

ಉಮಾಮಹೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಡಾ. ಕೆ.ಎನ್. ಚಂದ್ರಶೇಖರ್, ಉದ್ಯಮಿ ಜಿ. ಲಕ್ಷಿö್ಮ ರೆಡ್ಡಿ , ಸುಭಾಷಿಣಿ ರೆಡ್ದಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು ಕಾವೇರಪ್ಪ, ಧರ್ಮಸ್ಥಳ ಸೇವಾ ಸಂಘದ ನರಸಿಂಹ, ಡಾ. ಸುರೇಶ್, ಡಾ. ಸೌಮ್ಯ ಜೋಸೆಫ್, ಕೈಕೇರಿ ಪಥಾಂಜಲಿ ಯೋಗ ಸಂಸ್ಥೆಯ ಶಿಕ್ಷಕ ಗುರುರಂಗಯ್ಯ ಬಲ್ಲಾಳ್, ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ಶಿಕ್ಷಕ ಸೋಮಯ್ಯ, ಪ್ರಮುಖರಾದ ಸತೀಶ್, ಅಶ್ವಿನಿ ಉಪಸ್ಥಿತರಿದ್ದರು.