ಮಡಿಕೇರಿ, ಜ. ೧೬: ಕುವೈತ್‌ನಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಮೂಲದ ಪಾರ್ವತಿ ಎಂಬ ಮಹಿಳೆಯ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕರಡಿಗೋಡು ಗ್ರಾಮದ ಚೆಕ್ಕಿ ಎಂ. ಎಂಬವರಿAದ ಕರಡಿಗೋಡಿನ ಪಾರ್ವತಿ ಎಂಬವರು ಕಳೆದ ೩ ವರ್ಷಗಳಿಂದ ಕೇರಳದ ತಲಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪಾರ್ವತಿಗೆ ತಿಳಿದವರ ಸಂಪರ್ಕದಲ್ಲಿದ್ದ ತಮಿಳುನಾಡು ರಾಜ್ಯದ ಊಟಿಯ ಏಜೆಂಟ್ ಮೂಲಕ
ವಿದೇಶದಲ್ಲಿ ಸಿಲುಕಿರುವ ಮಹಿಳೆಯ ರಕ್ಷಣೆಗೆ ಕ್ರಮ
(ಮೊದಲ ಪುಟದಿಂದ)ವಿದೇಶದಲ್ಲಿ ಕೆಲಸ ಮಾಡಲು ಅವಕಾಶ ಕೊಡಿಸುವುದಾಗಿ ಹೇಳಿ, ಆ ಏಜೆಂಟ್‌ನ ಮೂಲಕ ಕುವೈತ್‌ಗೆ ತೆರಳಿದ್ದು, ಇದೀಗ ಪಾರ್ವತಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಕೆಲಸವೂ ಇಲ್ಲ. ಹಾಗೆಯೇ ಸರಿಯಾಗಿ ಸಂಬಳವೂ ಇಲ್ಲದೇ ಕೊಠಡಿಯೊಂದರಲ್ಲಿ ಬಂಧಿಸಿದ್ದಾರೆ.
ಈ ಬಗ್ಗೆ ಕುಟುಂಬಕ್ಕೆ ಪಾರ್ವತಿ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ಸ್ವೀಕೃತವಾಗಿದ್ದು, ಅಧಿಕಾರಿಗಳು ಸಂತ್ರಸ್ತೆಯೊAದಿಗೆ ಸಂವಹನ ಸಾಧಿಸಿ, ಆಕೆಗೆ ಧೈರ್ಯ ತುಂಬಿ ಸಂಬAಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಸಂತ್ರಸ್ತೆಯನ್ನು ಕ್ಷೇಮವಾಗಿ ಕುಟುಂಬದೊಡನೆ ಸೇರಿಸುವಲ್ಲಿ ಕಾರ್ಯವಹಿಸುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಸಂಬAಧ ತಾ. ೧೪ ರಂದು ‘ಶಕ್ತಿ’ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.