ಚೆಯ್ಯಂಡಾಣೆ, ಜ. ೧೬: ನರಿಯಂದಡ ಗ್ರಾಮ ಪಂಚಾಯಿತಿಯ ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದ ಮಡಿಕೇರಿ, ನಾಪೋಕ್ಲು, ವೀರಾಜಪೇಟೆ ಸಂಪರ್ಕಿಸುವ ವೃತ್ತದಲ್ಲಿ ಹಾಗೂ ಮುಖ್ಯ ರಸ್ತೆಯ ಪಟ್ಟಣದಿಂದ ಚೇಲಾವರ ಜಲಪಾತಕ್ಕೆ ತೆರಳುವಲ್ಲಿ ಸ್ಥಾಪಿಸಿದ ಬೀದಿ ದೀಪ ದುಸ್ಥಿತಿಯಲ್ಲಿದೆ. ಕಳೆದ ಕೆಲವು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಾಪಿಸಿದ ೨ ದೊಡ್ಡ ಮರ್ಕ್ಯುರಿ ಬೀದಿ ದೀಪ ೨ಲಕ್ಷಕ್ಕೂ ಅಧಿಕ ಮೊತ್ತ ಬೆಲೆಬಾಳುವುದಾಗಿದೆ. ಕೆಲವೇ ದಿನಗಳಲ್ಲಿ ಕೆಟ್ಟಿದ್ದು, ಗ್ರಾಮ ಪಂಚಾಯಿತಿ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗಲು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರೂ. ೨ ಲಕ್ಷಕ್ಕೂ ಅಧಿಕ ರೂಪಾಯಿಯಲ್ಲಿ ಮರ್ಕುರಿ ಬೀದಿ ದೀಪ ಅಳವಡಿಸಿದ್ದು, ಅಳವಡಿಸಿದ ಕೂಡಲೇ ದುಸ್ಥಿತಿ ತಲುಪಿದ್ದು, ಅದನ್ನು ಅಳವಡಿಸಿದ ಗುತ್ತಿಗೆದಾರರಿಗೆ ಮಾಹಿತಿ ನೀಡಲಾಗಿದೆ. ಆದರೆ ಯಾವುದೇ ಸ್ವಂzನ ಗುತ್ತಿಗೆದಾರ ನೀಡುತ್ತಿಲ್ಲ. ಆದಷ್ಟು ಶೀಘ್ರ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ದೀಪ ದುರಸ್ತಿ ಪಡಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ತಿಳಿಸಿದ್ದಾರೆ. -ಅಶ್ರಫ್