ಕುಶಾಲನಗರ, ಜ.೧೬: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ ೩ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ ಸಂಘಟಿಸುವ ನಿಟ್ಟಿನಲ್ಲಿ ನಗರದ ಸೋಮೇಶ್ವರ ದೇವಾಲಯದ ಬಳಿಯ ಚಂದ್ರಶೀ ವಾಣಿಜ್ಯ ಸಂಕೀರ್ಣದಲ್ಲಿ ತೆರೆಯಲ್ಲಿ ಸಾಹಿತ್ಯ ಸಮ್ಮೇಳನ ಕಚೇರಿಯನ್ನು ಕುಶಾಲನಗರ ತಾಲೂಕಿನ ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳÀವನ್ನು ಗುರುತಿಸಿ ಕೊಡುವುದಾಗಿ ಭರವಸೆಯಿತ್ತರು. ಮುಖ್ಯ ಅತಿಥಿಗಳಾಗಿದ್ದ ಪೊಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರ್ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಕನ್ನಡಿಗರ ಅಸ್ಮಿತೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮನಸುಗಳು ಸಮ್ಮೇಳನಕ್ಕೆ ಆಗಮಿಸಬೇಕು. ಸಾಹಿತ್ಯ ಪರಿಷತ್ತಿನ ಎಂದರು.
ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಸಾಪ ನಿರ್ದೇಶಕ ಎಂ.ಇ.ಮೊಹಿದ್ದೀನ್, ಟಿ.ಜಿ.ಪ್ರೇಮಕುಮಾರ್, ಮೆ.ನಾ.ವೆಂಕಟನಾಯಕ್, ಫ್ಯಾನ್ಸಿ ಮುತ್ತಣ್ಣ, ವಿ.ಟಿ.ಮಂಜುನಾಥ್, ದೇವರಾಜು, ತಾಲೂಕು ಸಮಿತಿ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಪ್ರೊ. ಹೆಚ್.ಬಿ. ಲಿಂಗಮೂರ್ತಿ, ಸಮ್ಮೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ವೆಂಕಟೇಶ ಪೂಜಾರಿ, ಎಂ.ಕೃಷ್ಣ, ಎಂ.ಡಿ.ರAಗಸ್ವಾಮಿ, ಎಂ.ಎನ್.ಚAದ್ರಮೋಹನ್, ಬಿ.ಎ.ನಾಗೇಗೌಡ, ಹೆಚ್.ಎಂ.ರಘು ಮುಂತಾದವರಿದ್ದರು.