ಮಡಿಕೇರಿ, ಜ. ೧೬: ಒಡಿಶಾದಲ್ಲಿ ನಡೆಯುತ್ತಿರುವ ೧೫ನೇ ವಿಶ್ವಕಪ್ ಹಾಕಿ ಪಂದ್ಯಾವಳಿಯ ಸಂದರ್ಭದಲ್ಲಿ ಭಾರತ ಹಾಕಿ ತಂಡದ ಮಾಜಿ ಆಟಗಾರರುಗಳಾದ ಕೊಡಗಿನ ಹಾಕಿ ಪಟುಗಳ ಸಮ್ಮಿಲನದ ಚಿತ್ರವಿದು. (ಚಿತ್ರ-೧)

ಮೂರು ಬಾರಿಯ ಒಲಂಪಿಯನ್ ಖ್ಯಾತಿಯ ಮನೆಯಪಂಡ ಎಂ. ಸೋಮಯ್ಯ ೧೯೭೫ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಆಟಗಾರರಾದ ಪೈಕೇರ ಕಾಳಯ್ಯ ಹಾಗೂ ಬಿ.ಪಿ. ಗೋವಿಂದ ಹಾಗೂ ಮಾಜಿ ಒಲಂಪಿಯನ್ ಡಾ|| ಅಂಜಪರವAಡ ಬಿ. ಸುಬ್ಬಯ್ಯ ಅವರುಗಳ ಭೇಟಿಯ ಸಂಭ್ರಮವಿದು.

ಮತ್ತೊAದು ಚಿತ್ರ (ಚಿತ್ರ-೨) ದಲ್ಲಿ ೧೯೭೫ರಿಂದ ವಿಶ್ವಕಪ್ ಹಾಕಿಯಲ್ಲಿ ಈತನಕ ಭಾರತ ತಂಡವನ್ನು ಪ್ರತಿನಿಧಿಸಿಕೊಂಡು ಬಂದಿರುವ ಆರು ಮಂದಿ ಗೋಲ್‌ಕೀಪರ್‌ಗಳು ಒಟ್ಟಿಗೆ ಇರುವ ಕ್ಷಣ ಇದಾಗಿದೆ. ಗೋಲ್‌ಕೀಪರ್‌ಗಳಾದ ಅಶೋಕ್ ದಿವಾನ್, ಲಾಸ್ಲೆ ಫರ್ನಾಂಡೀಸ್, ಮಿರ್ ರಂಜನ್ ನೇಗಿ, ಕೊಡಗಿನವರಾದ ಎ.ಬಿ. ಸುಬ್ಬಯ್ಯ ಹಾಗೂ ಪ್ರಸ್ತುತದ ಆಟಗಾg Àರಾಗಿರುವ ಶ್ರೀಜೇಶ್ ಹಾಗೂ ಕ್ರಿಶನ್ ಪಾಥಕ್ ಅವರುಗಳ ಸಮ್ಮಿಲನವಿದು.