ಸುಂಟಿಕೊಪ್ಪ, ಜ. ೧೬: ಇಲ್ಲಿನ ತಮಿಳು ಸಂಘದ ವತಿಯಿಂದ ೨೩ನೇ ವರ್ಷದ ಪೊಂಗಲ್ ಹಾಗೂ ಸಂಕ್ರಾAತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸÀಲಾಯಿತು.

ಮಾದಾಪುರ ರಸ್ತೆಯಲ್ಲಿರುವ ವೃಕ್ಷೆÆÃಧ್ಭವ ಮಹಾಗಣಪತಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದಿಂದ ಹಾಲಿನ ಕಳಸದೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತ ಭವ್ಯ ಮಂಟಪದ ಮೆರವಣಿಗೆ ನಾದಸ್ವರÀದೊಂದಿಗೆ ಸುಂಟಿಕೊಪ್ಪ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಕಳಸವಿಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಹಾಲಿನ ಅಭಿಷೇಕ ನಡೆದ ನಂತರ ಮಧ್ಯಾಹ್ನ ೧ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಅನ್ನದಾನ ನಡೆಯಿತು.

ಈ ಸಂದರ್ಭ ತಮಿಳು ಸಂಘ ಹಾಗೂ ಪೊಂಗಲ್ ಆಚರಣಾ ಸಮಿತಿ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷ ಶರವಣ, ಪ್ರಧಾನ ಕಾರ್ಯದರ್ಶಿ ಆರ್.ಅರುಣ್‌ಕುಮಾರ್, ಉಪಕಾರ್ಯದರ್ಶಿ ಎಂ.ಗಣೇಶ್, ಖಜಾಂಚಿ ವೇಲುಮುರುಗನ್, ಸಂಘಟನಾ ಕಾರ್ಯದರ್ಶಿ ಎಸ್.ಸೂರ್ಯ, ಸರ್ವ ಸದಸ್ಯರು ಹಾಗೂ ಹಿರಿÀಯ ನಾಗರಿಕರು ಹಾಜರಿದ್ದರು.