ಮಡಿಕೇರಿ, ಜ. ೧೬: ಗಣಪತಿ ಕೊಡವ ಕೇರಿಯ ಒತ್ತೋರ್ಮೆ ಕೂಟ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಸಂಭ್ರಮದಿAದ ಜರುಗಿತು.
ಹಿರಿಯರಾದ ಚೆರುಮಂದAಡ ಮಣಿ ಪೊನ್ನಪ್ಪ ಅವರು ನೆಲ್ಲಕ್ಕಿಯಲ್ಲಿ ದೇವರನ್ನು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಸದಸ್ಯರು, ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು. ನಂತರ ಕೇರಿಯ ಅಧ್ಯಕ್ಷರಾದ ಬೊಳ್ಳಂಡ ಗಣೇಶ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಾಂಪ್ರದಾಯಿಕ ಆಚರಣೆಗೆ ಮಹತ್ವ ನೀಡುವ ಮೂಲಕ ಕೊಡವ ಪದ್ಧತಿ, ಪರಂಪರೆಗಳನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಬೊಳ್ಳಂಡ ಗಣೇಶ್ ಕರೆ ನೀಡಿದರು. ಕೇರಿಯ ಕಾರ್ಯದರ್ಶಿ ಮಂಡಿರ ಸದಾ ಮುದ್ದಪ್ಪ ವರದಿ ವಾಚಿಸಿದರು. ಮುಂದಿನ ದಿನಗಳಲ್ಲಿ ಕೇರಿಯ ಆಡಳಿತ ಮಂಡಳಿ ನಡೆಸುವ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.
ವೇದಿಕೆಯಲ್ಲಿ ಕೋಟೆರ ಅಶೋಕ್, ಚಂಬಾAಡ ಸುರೇಶ್, ಕೋಡಿರ ಅರುಣ್, ಕೂಪದಿರ ಗಣೇಶ್, ತೇಲಪಂಡ ಸ್ವಾತಿ, ಚಂಬAಡ ಸುನಿ ಮುತ್ತಪ್ಪ, ಬೊಳಂದAಡ ಸುಶೀಲ ಉಪಸ್ಥಿತರಿದ್ದರು. ಮಂಡಿರ ಯುಕ್ತಾ ನೀಲಮ್ಮ ಪ್ರಾರ್ಥಿಸಿ ಕೋಟೆರ ಮೀರಾ ವಂದಿಸಿದರು.