ಕೂಡಿಗೆ, ಜ. ೧೪: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಲೋಕನಾಥ್, ಶಾಸಕರ ನಿಧಿಯಲ್ಲಿ ೫ ಲಕ್ಷ ರೂ.ಗಳಲ್ಲಿ ನೂತನ ಕೊಠಡಿಗಳು ನಿರ್ಮಾಣಗೊಳ್ಳಲಿದೆ ಎಂದರು. ಸಂಸ್ಥೆ ಸಾಗಿಬಂದ ಹಾದಿಯ ಬಗ್ಗೆ ಪ್ರಸ್ತಾವಿಕವಾಗಿ ವಿವರಿಸಿದರು.
ಉದ್ಘಾಟನೆಯನ್ನು ನೆರವೇರಿಸಿ ನಂತರ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಹಿಂದಿನ ಕಾಲದಲ್ಲಿ ದಾನಿಗಳು, ಸಾರ್ವಜನಿಕರಿಂದ ವಂತಿಗೆ ಪಡೆದು ಶಾಲೆ ಕಟ್ಟಡ ನಿರ್ಮಿಸಬೇಕಾದ ಪರಿಸ್ಥಿತಿ ಇತ್ತು. ಈಗ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ. ಕಳೆದ ಮಕ್ಕಳ ದಿನಾಚರಣೆಯಂದು ರಾಜ್ಯದಲ್ಲಿ ೮ ಸಾವಿರ ಕೊಠಡಿಗಳ ನಿರ್ಮಾಣಕ್ಕೆ ಸರಕಾರ ಚಾಲನೆ ನೀಡಿ ಪ್ರತಿ ಕ್ಷೇತ್ರಕ್ಕೆ ೪ ಕೋಟಿ ಅನುದಾನ ಒದಗಿಸಿದೆ, ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಇದರಂತೆಯೇ ನಂಜರಾಯಪಟ್ಟಣ ಶಾಲೆಗೆ ೫ ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡಕ್ಕೆ ಅನುದಾನವನ್ನು ನೀಡಲಾಗಿದೆ ಎಂದರು.
ಈ ಸಂದರ್ಭ ವಿದ್ಯಾ ಸಂಘದ ಒತ್ತು ಕೊಡುವ ನಿಟ್ಟಿನಲ್ಲಿ ಸರಕಾರ ಮುಂದಾಗಿದೆ. ಕಳೆದ ಮಕ್ಕಳ ದಿನಾಚರಣೆಯಂದು ರಾಜ್ಯದಲ್ಲಿ ೮ ಸಾವಿರ ಕೊಠಡಿಗಳ ನಿರ್ಮಾಣಕ್ಕೆ ಸರಕಾರ ಚಾಲನೆ ನೀಡಿ ಪ್ರತಿ ಕ್ಷೇತ್ರಕ್ಕೆ ೪ ಕೋಟಿ ಅನುದಾನ ಒದಗಿಸಿದೆ, ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಇದರಂತೆಯೇ ನಂಜರಾಯಪಟ್ಟಣ ಶಾಲೆಗೆ ೫ ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡಕ್ಕೆ ಅನುದಾನವನ್ನು ನೀಡಲಾಗಿದೆ ಎಂದರು.