ಗೋಣಿಕೊಪ್ಪಲು, ಜ. ೧೪: ಕೊಡಗು ಜಿಲ್ಲೆಯಲ್ಲಿ ೪,೫೦೦ಕ್ಕೂ ಅಧಿಕ ಆದಿವಾಸಿ ಕುಟುಂಬಗಳು ಕಾಫಿ ಮಾಲೀಕರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾ.೧೭ರಂದು ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಗೋಣಿಕೊಪ್ಪಲು, ಜ. ೧೪: ಕೊಡಗು ಜಿಲ್ಲೆಯಲ್ಲಿ ೪,೫೦೦ಕ್ಕೂ ಅಧಿಕ ಆದಿವಾಸಿ ಕುಟುಂಬಗಳು ಕಾಫಿ ಮಾಲೀಕರ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾ.೧೭ರಂದು ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಮನೆಯಲ್ಲಿ ವಾಸ ಮಾಡುವ ಆದಿವಾಸಿಗಳಿಗೆ ನೀಡಬೇಕು. ಈ ಭಾಗದಲ್ಲಿ ೧೯೦ಕ್ಕೂ ಅಧಿಕ ಆದಿವಾಸಿಗಳು ನಿವೇಶನ ರಹಿತರಾಗಿದ್ದಾರೆ.
ಈ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಂದನಕೆರೆ ಹಾಗೂ ತಿರುನಾಡ ಹಾಡಿಗಳ ಜನರು ಇನ್ನೂ ಕೂಡ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಡಿಗಳ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಸುಮಾರು ೩ ಕಿ.ಮೀ.ನಷ್ಟು ಇದ್ದು ರಸ್ತೆಯು ತುಂಬಾ ಇಕ್ಕಟ್ಟಾಗಿದೆ. ಈ ಹಾಡಿಗಳಿಂದ ೨೫ಕ್ಕೂ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಮಳೆಗಾಲ ಸಂದರ್ಭ ವನ್ಯ ಪ್ರಾಣಿಗಳ ಭಯದಿಂದಲೇ ೫ ಕಿ.ಮೀ. ನಡೆದು ಶಾಲೆಗೆ ತೆರಳಬೇಕಾಗಿದೆ. ಅಲ್ಲದೆ ಚಂದನಕೆರೆ ಹಾಡಿಯ ಜನರಿಗೆ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಿಸಿದ್ದು, ಮಳೆಗಾಲ ಸಂದರ್ಭ ಬಾವಿಯೊಳಗಡೆ ಕಲುಷಿತ ನೀರು ಸೇರಿ ಕುಡಿಯಲು ಯೋಗ್ಯವಿರುವುದಿಲ್ಲ.
ತಿರುನಾಡ ಹಾಡಿಯಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಒಂದು ಕಿರು ಸೇತುವೆ ಕಾಮಗಾರಿಯ ಕೆಲಸವು ಎರಡು ವರ್ಷಗಳ ಹಿಂದೆಯೇ ತೊಡಗಿದ್ದು ಈ ಕಾಮಗಾರಿಯು ಇನ್ನೂ ಕೂಡ ಪೂರ್ಣಗೊಂಡಿರುವುದಿಲ್ಲ. ಇದರಿಂದ ತಿರುನಾಡ ಹಾಡಿಯ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ತಿರುನಾಡ ಹಾಡಿಯ ಸ್ಮಶಾನ ಜಾಗವು ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವುದರಿAದ ಸ್ಮಶಾನಕ್ಕೆ ತೆರಳುವ ಸಂದರ್ಭ ಈ ಭಾಗದ ಜನರು ಸುಮಾರು ೧೫.ಕಿ.ಮೀ.ನಷ್ಟು ದೂರ ಸುತ್ತಿ ತೆರಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಸಲುವಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಚಾಲಕ ರಮೇಶ್, ಜಿಲ್ಲಾ ಪ್ರಮುಖರಾದ ಪಿ.ಆರ್.ರವಿ, ಪಿ.ಟಿ.ಲೋಕೇಶ್, ಪಿ.ಬಿ.ರಮೇಶ್ ತಿಳಿಸಿದರು.