ಕುಶಾಲನಗರ, ಜ. ೧೪: ಕುಶಾಲನಗರ ಪುರಸಭೆ ವ್ಯಾಪ್ತಿಯ ೧ ನೇ ಬ್ಲಾಕ್‌ನ ಬೈಚನಹಳ್ಳಿ ಬಿ.ಎಂ ರಸ್ತೆ ಸರ್ವೆ ನಂ. ೧೧೫ ಮತ್ತು ೧೪೫ ರ ಸ್ವತ್ತನ್ನು ಅನಧಿಕೃತದಿಂದ ಅಧಿಕೃತವಾಗಿ ಮಾಡಿಕೊಡುವ ಪ್ರಕರಣ ಬೆನ್ನಲ್ಲೇ ಕುಶಾಲನಗರ ಪಟ್ಟಣ ಹಲವು ಘಟನೆಗಳು ಸಾಕ್ಷಿಯಾಗುತ್ತಿದ್ದು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಒತ್ತಡ, ಅಸಹಾಯಕತೆ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಕುಶಾಲನಗರ ನಗರ ಪ್ರಾಧಿಕಾರದಿಂದ ಅನುಮೋದಿತ ನಕ್ಷೆಯಂತೆ ಬಡಾವಣೆಯಾಗಿ ಪರಿವರ್ತನೆಯಾಗದೇ ಇರುವುದರಿಂದ ಬಡಾವಣೆಯನ್ನು ಅಧಿಕೃತವಾಗಿ ಖಾತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಂದ ಆದೇಶ ಬಂದಿದ್ದರೂ, ಸ್ಥಳೀಯ ಭೂ ಮಾಫಿಯ ದಂಧೆಕೋರರು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳನ್ನು ಬೆದರಿಸುವ ತಂತ್ರಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಡಾವಣೆ ಪ್ರಕರಣ ನಡುವೆ ಈಗಾಗಲೇ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳನ್ನು ಕೂಡ ವರ್ಗಾವಣೆ ಮಾಡಿಸುವಲ್ಲಿ ಭೂ ಮಾಫಿಯಾ ದಂಧೆ ಕೈ ಮೇಲಾಗಿದೆ. ಇದರೊಂದಿಗೆ ಬಡಾವಣೆಯ ಬಗ್ಗೆ ಸ್ವರ ಎತ್ತುವ ಜನಪ್ರತಿನಿಧಿಗಳಿಗೆ ಜೀವ ಬೆದರಿಕೆ ಒಡ್ಡುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ.
ಕುಶಾಲನಗರ- ಮಡಿಕೇರಿ ಹೆದ್ದಾರಿ ರಸ್ತೆಯ ಒತ್ತಿನಲ್ಲಿರುವ ಸುಮಾರು ೪ ಎಕರೆ ವಿಸ್ತೀರ್ಣದ ಬಡಾವಣೆಯಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ಕಲಂ ೧೧೧, ೧೧೨, ೧೧೩ ರಲ್ಲಿ ಹಕ್ಕು ವರ್ಗಾವಣೆ ಮಾಡುವ ಪ್ರಕ್ರಿಯೆಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕೈಗೊಳ್ಳಬೇಕಾಗಿದೆ. ಕುಶಾಲನಗರ ನಗರಯೋಜನಾ ಪ್ರಾಧಿಕಾರದಿಂದ ನಕ್ಷೆಯಂತೆ ಬಡಾವಣೆಯಾಗಿ ಪರಿವರ್ತನೆಯಾಗದೇ ಇರುವುದರಿಂದ ಈ ಜಾಗಗಳನ್ನು ಅನಧಿಕೃತ ಎಂದು ಹಿಂದಿನ ಪಟ್ಟಣ ಪಂಚಾಯಿತಿ ಘೋಷಣೆ ಮಾಡಿತ್ತು. ಸಂಬAಧಪಟ್ಟ ಇಲಾಖೆಯಿಂದ ಭೂ ಉಪಯೋಗದ ಬದಲಾವಣೆಯ ಅನುಮೋದನೆ ಪಡೆದ ನಂತರವೇ ಬಡಾವಣೆಯಾಗಿ ಪರಿವರ್ತಿಸಿ ಅಧಿಕೃತವಾಗಿ ಖಾತೆ ದಾಖಲಿಸಲು ಜಿಲ್ಲಾಧಿಕಾರಿಗಳ ಕಚೇರಿ ೨೦೨೨ ಜುಲೈ ೩೦ ರಲ್ಲಿ ಜ್ಞಾಪನ ಪತ್ರ ಹೊರಡಿಸಿತ್ತು.
ಅನುಮೋದನೆ ಪಡೆಯದೆ ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಅನಧಿಕೃತ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಮತ್ತು ಕಾಂಪೌAಡ್‌ಗಳನ್ನು ತಕ್ಷಣ ತೆರವುಗೊಳಿಸಿ ಭೂಮಿಯನ್ನು ಮೂಲ ಸ್ಥಿತಿಗೆ ಮರು ಸ್ಥಾಪಿಸುವಂತೆ ಕುಶಾಲನಗರ ಯೋಜನಾ ಪ್ರಾಧಿಕಾರದಿಂದ ಬಡಾವಣೆಯ ಮಾಲೀಕರಿಗೆ ನೋಟೀಸ್ ನೀಡಲಾಗಿತ್ತು. ಅನಧಿಕೃತ ಬಡಾವಣೆ ಹಿನ್ನೆಲೆಯಲ್ಲಿ ಬಡಾವಣೆಗೆ ಕಲ್ಪಿಸಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸುವ ಬಗ್ಗೆ ಕುಶಾಲನಗರ ಯೋಜನಾ ಪ್ರಾಧಿಕಾರದಿಂದ ಸಂಬAಧಪಟ್ಟ ಇಲಾಖೆಗಳಿಗೆ ೨೦೨೨ ಜುಲೈ ತಿಂಗಳಿನಲ್ಲಿ ಸೂಚನೆ ನೀಡಲಾಗಿತ್ತು. ಒಟ್ಟಾರೆ ಕುಶಾಲನಗರದ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ, ಹಗರಣಗಳಿಂದ ಮುಕ್ತವಾಗದೇ ಇರುವುದು ಕುಶಾಲನಗರದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.
ಇದೀಗ ಮತ್ತೆ ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಕೆಲವು ರಿಯಲ್ ಎಸ್ಟೇಟ್ ಮಾಫಿಯಾದ ವ್ಯಕ್ತಿಗಳು ಅಧಿಕಾರಿಗಳನ್ನು ಬೆದರಿಸಿ ಹಲ್ಲೆ ಮಾಡುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕುಶಾಲನಗರ ಪುರಸಭೆ ಸದಸ್ಯ ಬಿ.ಎನ್‌ಜಗದೀಶ್ ಹೇಳಿಕೆ ನೀಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್ ಅವರ ಮನೆಗೆ ನುಗ್ಗಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಶಕ್ತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳನ್ನು ಜಗದೀಶ್ ಆಗ್ರಹಿಸಿದ್ದಾರೆ.
-ಚಂದ್ರಮೋಹನ್