ಚೆಟ್ಟಳ್ಳಿ, ಜ. ೧೩: ಕಾಫಿ ತೋಟಗಳ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ಶಿಬಿರವನ್ನು ಕಾಫಿ ಮಂಡಳಿ ವತಿಯಿಂದ ಶನಿವಾರಸಂತೆ ವಿಭಾಗದ ಆಯ್ದ ಕಾಫಿ ತೋಟದಲ್ಲಿ ನಡೆಸಲಾಯಿತು. ಕಾಫಿ ಮಂಡಳಿಯ ಕಾಫಿ ಸಂಶೋಧನಾ ಉಪಕೇಂದ್ರದ ಮಣ್ಣಿನ ತಜ್ಞರ ಸಲಹೆಯಂತೆ ಶನಿವಾರಸಂತೆ ವಿಭಾಗದ ಕಿರಿಯ ಸಂಪರ್ಕಾಧಿಕಾರಿ ಡಾ. ರಂಜಿತ್ ಕುಮಾರ್ ಬಿ.ವಿ. ಹಾಗೂ ಉಪಸಂಪರ್ಕಾಧಿಕಾರಿ ಡಾ. ಸೀನಾ ಮೋಹನ್ ಅವರು ಕಾಫಿ ತೋಟದಲ್ಲಿ ವಿವಿಧ ವಿಧಾನಗಳ ಮೂಲಕ ಮಣ್ಣನ್ನು ಸಂಗ್ರಹಿಸುವ ಪ್ರಾತ್ಯಕ್ಷಿತೆಯನ್ನು ಪ್ರದರ್ಶಸಿದರು. ಪ್ರತಿ ಮೂರು ವರ್ಷಕೊಮ್ಮೆ ಮಣ್ಣಿನ ಪರೀಕ್ಷೆ ಮಾಡುವ ಮೂಲಕ ಮಣ್ಣಿನ ಸಾರವನ್ನು ತಿಳಿದು ಪೂರಕ ಗೊಬ್ಬರವನ್ನು ಹಾಕಿ ಉತ್ತಮ ಇಳುವರಿ ಪಡೆಯಬಹುದೆಂದು ಬೆಳೆಗಾರರಿಗೆ ಮಾಹಿತಿ ನೀಡಿದರು.