ಗೋಣಿಕೊಪ್ಪ ವರದಿ, ಜ. ೧೩: ಕೊಡಗು ಪ್ರೆಸ್ ಕ್ಲಬ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೋಣಿಕೊಪ್ಪ ಕಾಲ್ಸ್ ಸಹಯೋಗದಲ್ಲಿ ಕಾಲ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಚಿತ್ರಕಲಾ ಸ್ಪರ್ಧೆಯಲ್ಲಿ ೩೪೦ ಚಿತ್ರಗಳು ಕಣ್ಮನ ಸೆಳೆದವು. ಕಿರಿಯ ಮಕ್ಕಳು ಅವರದ್ದೇ ಚಿಂತನೆಯ ಚಿತ್ರಕ್ಕೆ ಬಣ್ಣ ಹಚ್ಚಿದರು. ವನ್ಯಜೀವಿ, ಕಾವೇರಿ ನದಿ ಐತಿಹ್ಯ, ಪ್ರಕೃತಿ ಚಿತ್ರಗಳು ಮೂಡಿ ಬಂದವು.
ಫಲಿತಾAಶ : ಕಿರಿಯ ಪ್ರಾಥಮಿಕ ವಿಭಾಗದ ಪಿ.ಎಂ. ಸಮುದೈತ (ಪ್ರ), ಕೆ.ಎಂ. ದೀಕ್ಷಾ (ದ್ವಿ), ಎಚ್.ಆರ್. ಮೋಕ್ಷಾ (ತೃ), ಕಾಕೇರ ಪೌನ ಪೂವಮ್ಮ, ಎಂ.ಎಸ್. ರಿನ್ಸಿ, ಟಿ.ಡಿ. ರಿಧಿ ಪೊನ್ನಮ್ಮ ಸಮಧಾನಕರ ಬಹುಮಾನ ಪಡೆದುಕೊಂಡರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಚೀರಂಡ ಸಿ. ತಿಮ್ಮಯ್ಯ (ಪ್ರ), ಎಂ.ಸಿ. ಶಿವಾನಿ (ದ್ವಿ), ಕೆ.ಎಂ. ಉನ್ಮಯ್ (ತೃ), ಅಲಿಕಾ ಮನ್ನಾ, ವಿ.ಎಸ್. ಸುಜಯ್ ಸಮಧಾನಕರ ಬಹುಮಾನ ಪಡೆದರು. ಪ್ರೌಢ ವಿಭಾಗದಲ್ಲಿ ಸಿ.ಪಿ. ಭುವನಾ (ಪ್ರ), ಬಿ.ಎಂ. ಸೀತಮ್ಮ (ದ್ವಿ), ಟಿ.ಎಸ್. ವಿಷ್ಣು (ತೃ), ಎ.ಎಸ್. ತನಿಷ್ಕಾ, ಕೆ.ಎಲ್. ತಸ್ಫಯಾ ಸಮದಾನಕರ ಬಹುಮಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಅಧಿತಿ ಭಾನುಪ್ರಕಾಶ್ (ಪ್ರ), ಹರ್ಷಿನಿ ಪ್ರದೀಪ್ (ದ್ವಿ), ಆರ್. ಮನೋಜ್ (ತೃ), ರಿಸಿಸ್ ಸುಬ್ಬಯ್ಯ, ಜೆ. ಸಾಧು ಸಮಧಾನಕರ ಬಹುಮಾನ ದೊರಕಿತು. ಸಾರ್ವಜನಿಕ ವಿಭಾಗದಲ್ಲಿ ಕ್ಲಿಫರ್ಡ್ ಡಿಮೆಲ್ಲೋ (ಪ್ರ), ಕೆ.ಎ. ಲೋಹಿತ್ (ದ್ವಿ), ಪಿ.ಆರ್. ನಿಸಾರ್ (ತೃ), ಸದಾನಂದ ಪುರೋಹಿತ್, ಪುತ್ತಾಮನೆ ವಿದ್ಯಾ ಜಗದೀಶ್ ಸಮಧಾನಕರ ಬಹುಮಾನ ಪಡೆದರು. ಪತ್ರಕರ್ತರ ವಿಭಾಗದಲ್ಲಿ ಐಮಂಡ ಗೋಪಾಲ್ ಸೋಮಯ್ಯ (ಪ್ರ), ಚೈತನ್ಯ (ದ್ವಿ), ಪ್ರದೀಪ್ ಕುಮಾರ್ (ತೃ), ಸುನಿಲ್ ಪೊನ್ನೇಟಿ, ವನಿತಾ ಚಂದ್ರಮೋಹನ್ ಸಮದಾನಕರ ಬಹುಮಾನ ಪಡೆದರು.
ಸಮಾರೋಪ: ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ತನ್ನದೇ ಆದ ಸೇವೆ ನೀಡುತ್ತಿದೆ. ಕೊಡಗಿನ ಪತ್ರಕರ್ತರು ಜಿಲ್ಲೆಯಲ್ಲಿ ನಡೆದ ಜಲಪ್ರಳಯ ಹಾಗೂ ಕೋವಿಡ್ ಕಾಲದಲ್ಲಿ ಸಾಮಾಜಿಕ ಜವಬ್ದಾರಿ ನಿಭಾಯಿಸಿದ ರೀತಿ ಮೆಚ್ಚುವಂತ ವಿಚಾರವಾಗಿದೆ. ವೃತ್ತಿಯೊಂದಿಗೆ ಕಲೆ ಪೋಷಣೆಗೂ ಚಿತ್ರಕಲಾ ಕಾರ್ಯ ಕ್ರಮದ ಮೂಲಕ ತೊಡಗಿ ಕೊಂಡಿರುವುದು ಶ್ಲಾಘನೀಯ ಎಂದರು. ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಐಮಂಡ ಗೋಪಾಲ್ ಸೋಮಯ್ಯ ನಡೆಯಿತು. ಕಾಲ್ಸ್ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ, ವೀರಾಜಪೇಟೆ ಲಿಟ್ಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ, ಅಂರ್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಟಿ.ಎನ್. ಮಂಜುನಾಥ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್ ಬಹುಮಾನ ವಿತರಣೆ ಮಾಡಿದರು.
ಕಲಾವಿದರಾದ ರೂಪೇಶ್ ನಾಣಯ್ಯ, ರಾಮ್ ಗೌತಂ ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಸುನಿಲ್ ಪೊನ್ನೇಟಿ ನಿರೂಪಿಸಿದರು. ಚನ್ನನಾಯಕ ವಂದಿಸಿದರು.