ಕುಶಾಲನಗರ, ಜ. ೧೩ : ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಿದ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮತ್ತು ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರು ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಪ್ರಕರಣ ಪತ್ತೆಹಚ್ಚಲು ಸಿಸಿ ಕ್ಯಾಮರಾ ಅಳವಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಿರುವ ಹೆಬ್ಬಾಲೆ ಗ್ರಾಮದ ಸಾರ್ವಜನಿಕರನ್ನು ಎಸ್.ಪಿ. ಶ್ಲಾಘಿಸಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಮಾರ್ಗದರ್ಶನ ನೀಡಿದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ವೃತ್ತನಿರೀಕ್ಷಕ ಬಿ.ಜಿ. ಮಹೇಶ್ ನೇತೃತ್ವದ ತಂಡದ ಠಾಣಾಧಿಕಾರಿ ಚಂದ್ರಶೇಖರ್, ಭಾರತಿ, ಎ.ಎಸ್.ಐ.ಗಳಾದ ವೆಂಕಟೇಶ್, ಗೋಪಾಲ್, ಸಿಬ್ಬಂದಿಗಳಾದ ಸತೀಶ್, ಮಂಜುನಾಥ, ದಯಾನಂದ, ಲೋಕೇಶ್, ಚೆಂಗಪ್ಪ, ಅಜಿತ್, ನಾಗರಾಜ್, ಪ್ರಕಾಶ್, ಪ್ರವೀಣ್, ಸಂದೇಶ್, ದಿವೇಶ್, ರಂಜಿತ್, ಸಿಡಿಆರ್ ಘಟಕದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕರಾದ ರಾಜು, ಅರುಣ್, ಯೋಗೇಶ್ ಅವರುಗಳಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ಜಿಲೆಯಲ್ಲಿ ಸಾರ್ವಜನಿಕರು ಮನೆ ಹಾಗೂ ಅಂಗಡಿಗಳಿಗೆ ಸಿಸಿ ಕ್ಯಾಮರಾ ಸೆನ್ಸಾರ್‌ಗಳನ್ನು ಅಳವಡಿಸುವಂತೆ ಹಾಗೂ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಸ್ವತ್ತುಗಳು ನಗದು ಚಿನ್ನಾಭರಣಗಳನ್ನು ಮನೆ ಅಥವಾ ಅಂಗಡಿಯಲ್ಲಿ ಇಡಬಾರದೆಂದು ಅವರು ಸಲಹೆ ನೀಡಿದ್ದಾರೆ. ಸಾರ್ವಜನಿಕರು ಅಂಗಡಿ ಅಥವಾ ಮನೆಗೆ ಬೇಗ ಹಾಕಿಕೊಂಡು ಬೇರೆ ಕಡೆ ತೆರಳುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ೧೧೨ ತಂತ್ರಾAಶ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದ್ದಾರೆ.