ಸುಂಟಿಕೊಪ್ಪ, ಜ. ೧೩: ಮನೆಯೊಳಗಿದ್ದ ಸುಮಾರು ಹತ್ತು ವರ್ಷ ಪ್ರಾಯದ ನಾಗರ ಹಾವನ್ನು ಸ್ನೇಕ್ ಪ್ರವೀಣ ಅವರು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರÀದೇಶಕ್ಕೆ ಬಿಟ್ಟಿದ್ದಾರೆ.

ಮಡಿಕೇರಿಯ ವಿದ್ಯಾನಗರದ ಸುಮ ಎಂಬವರ ಮನೆಯಲ್ಲಿದ್ದ ಭಾರೀ ಗಾತ್ರದ ನಾಗರ ಹಾವು ಕಂಡು ಬಂದಿದ್ದು, ಅವರು ಕೂಡಲೇ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಸ್ನೇಕ್ ಪ್ರವೀಣ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ನೇಕ್ ಪ್ರವೀಣ ನಾಗರ ಹಾವನ್ನು ಹಿಡಿದು ಹಾವಿಗೆ ನೀರನ್ನು ಕುಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ನಾಗರ ಹಾವು ಯಾವುದೇ ಕಾರಣಕ್ಕೂ ಜನರನ್ನು ಕಚ್ಚುವ ಉದ್ದೇಶ ಹೊಂದಿರುವುದಿಲ್ಲ. ಮನುಷ್ಯ ಹಾವಿಗೆ ತೊಂದರೆ ಕೊಟ್ಟಲ್ಲಿ ಭಯದಿಂದ ಹಾಗೂ ಸಿಟ್ಟಿನಿಂದ ಕಚ್ಚಲು ಬರುತ್ತದೆ. ಹಾವಿಗೆ ಕಿವಿ ಕೇಳಿಸುವುದಿಲ್ಲ. ನಾವು ಅದಕ್ಕೆ ಉಪದ್ರ ಮಾಡಬಾರದು ಎಂದರು. ಇಂತಹ ಹಾವುಗಳು ಕಂಡುಬAದಲ್ಲಿ ಮೊ. ೮೧೯೭೬೮೯೯೩೪ ಸಂಖ್ಯೆಗೆ ಕರೆ ಮಾಡುವಂತೆ ಮಾಹಿತಿ ನೀಡಿದರು.