ವೀರಾಜಪೇಟೆ, ಜ. ೧೩: ವೀರಾಜಪೇಟೆಯ ಕಾವೇರಿ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವೀರಾಜಪೇಟೆಯ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ಕುಕ್ಲೂರಿನಲ್ಲಿರುವ ಮರಗಳನ್ನು ಕೊಯ್ಯುವ

ಕಾರ್ಖಾನೆಗೆ ಕ್ಷೇತ್ರ ಪ್ರವಾಸ ಕೈಗೊಂಡಿದ್ದರು.

ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಠಾಣೆಯಲ್ಲಿರುವ ಆಯುಧಗಳು, ಸುರಕ್ಷಾ ಕವಚಗಳ ಬಗ್ಗೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್. ಶಿವರುದ್ರ,

ಸಬ್‌ಇನ್ಸಪೆಕ್ಟರ್ ಸಿ.ವಿ. ಶ್ರೀಧರ್, ಪಿಎಸ್‌ಐ ಮಂಜುನಾಥ್, ಹೆಡ್‌ಕಾನ್ಸ್ಟೆಬಲ್ ಬಿ.ವಿ. ಸತೀಶ್, ಕಾನ್ಸ್ಟೆಬಲ್‌ಗಳಾದ ಕೆ. ಮಲ್ಲಿಕಾರ್ಜುನ, ಅಭಿಷೇಕ್, ಸಂದೀಪ್ ಹಾಗೂ ಬಿ.ಎನ್. ರಮ್ಯ ಮತ್ತು ಅರ್ಪಿತಾರವರು ವಿವರಿಸಿದರು.

ಹಾಗೂ ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ಎ ಎಸ್‌ಐ ಚಂದ್ರಶೇಖರ್ ಮತ್ತು ಎಎಸ್‌ಐ ಮೋಹನ್, ಹೆಡ್‌ಕಾನ್ಸ್ಟೆಬಲ್ ಕಿರಣ್ ಕುಮಾರ್ ಹಾಗೂ ಮಹಿಳಾ ಕಾನ್ಸ್ಟೆಬಲ್‌ರವರುಗಳಾದ ಅನುಪಮ, ಶಿಲ್ಪಾ ಸಹಕಾರ ನೀಡಿದರು. ತದನಂತರ ಕುಕ್ಲೂರಿನಲ್ಲಿ ಮರಗಳನ್ನು ಕೊಯ್ಯುವ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿ ಮರ ಕೊಯ್ಯುವ ಯಂತ್ರವನ್ನು ವೀಕ್ಷಿಸಲಾಯಿತು. ಅಲ್ಲಿ ಪ್ಲೆöÊವುಡ್ ಯಾವ ರೀತಿ ತಯಾರಿಸುತ್ತಾರೆ ಎಂದು ಕಾರ್ಖಾನೆಯ ಮಾಲೀಕ ನಿಕ್ಸÀನ್‌ರವರು ವಿವರಿಸಿದರು.

ಈ ಸಂದರ್ಭ ವಿದ್ಯಾರ್ಥಿ ಗಳೊಂದಿಗೆ ಸಹಶಿಕ್ಷಕಿಯರಾದ ಪಾರ್ವತಿ, ಭಾಗ್ಯ, ಸುಪ್ರೀತಾ, ಶೃತಿ, ಮೇಘನಾ, ಅಕ್ಷಿತಾ ಪೊನ್ನಮ್ಮ ಪಾಲ್ಗೊಂಡಿದ್ದರು.