ನಾಳೆ ಸಂಕ್ರಾAತಿ ಹಬ್ಬದ ಸಂಭ್ರಮ. ಈ ಹಬ್ಬಕ್ಕೆಂದೇ ವಿಶೇಷವಾಗಿ ಹಬ್ಬದ ರಂಗನ್ನು ಪ್ರತಿಬಿಂಬಿಸುವ ವೀಡಿಯೋ ಸಾಂಗ್ ಒಂದು ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ‘ಸಂಕ್ರಾAತಿ ತಕ ಥೈ’... ಹೆಸರಿನ ಈ ವೀಡಿಯೋ ಸಾಂಗ್‌ನಲ್ಲಿ ಕೊಡಗಿನವರಾದ ಚಿತ್ರತಾರೆ ಹರ್ಷಿಕಾ ಪೂಣಚ್ಚ ಅವರು ಹೆಜ್ಜೆ ಹಾಕುವ ಮೂಲಕ ಕಾಣಿಸಿಕೊಂಡಿದ್ದಾರೆ.

ಹಬ್ಬ ಎಂದರೆ ಹಾಡು... ಸಂಭ್ರಮ ಕುಣಿತ ಇವೆಲ್ಲವೂ ಇರುತ್ತವೆ. ಹಳ್ಳಿಯ ವಾತಾವರಣದ ಕಂಪನ್ನು ಹೊರ ಸೂಸುವ ಹಬ್ಬಾಚರಣೆಯ ಸಂಭ್ರಮ ಸಾಂಪ್ರದಾಯಿಕ ಉಡುಗೆ... ನೃತ್ಯ - ಆಚರಣೆಗಳನ್ನು ಪ್ರತಿಬಿಂಬಿಸುವ ವೀಡಿಯೋ ಸಾಂಗ್ ಇದಾಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ.

ಹರ್ಷಿಕಾರೊಂದಿಗೆ ಪ್ರಥ್ವಿ ಅಂಬಾರ್, ರಾಧಿಕಾ ನಾರಾಯಣ್ ಹಾಗೂ ಸ್ಪೆಷಲ್ ಅಫೀಯರೆನ್ಸ್ನಲ್ಲಿ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಮಲೆಯಾಳಂನ ಅನೂಪ್‌ಮೆನನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ತೆಲುಗುವಿನ ನೃತ್ಯ ನಿರ್ದೇಶಕ ಆನ್ವಿ ಮಾಸ್ಟರ್ ಕೊರಿಯೋಗ್ರಫಿ ಇದೆ. ಈಗಾಗಲೇ ಈ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು, ಹಬ್ಬಕ್ಕೆ ಹೊಸಕಳೆ ಒದಗಿಸುತ್ತಿದೆ. -ಶಶಿ